ರಾಜ್ಯದಲ್ಲಿ ಇಂದು 1,074 ಪಾಸಿಟಿವ್, ಟಿಪಿಆರ್ ಶೇ. 0.63, ಇನ್ನು16,992 ಸಕ್ರೀಯ ಪ್ರಕರಣಗಳು

ರಾಜ್ಯದಲ್ಲಿ ಇಂದು 1,074 ಪಾಸಿಟಿವ್, ಟಿಪಿಆರ್ ಶೇ. 0.63, ಇನ್ನು16,992 ಸಕ್ರೀಯ ಪ್ರಕರಣಗಳು


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಇಳಿಕೆಯಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 1,074 ಕೊರೋನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,59,164ಕ್ಕೆ ಏರಿಕೆಯಾಗಿದೆ.


ಮಹಾಮಾರಿಗೆ ಇಂದು 4 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,462ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಟ್ವೀಟ್ ಮಾಡಿದೆ. ರಾಜ್ಯದಲ್ಲಿ ಇಂದು 1,136 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 29,04,683ಕ್ಕೆ ಏರಿಕೆಯಾಗಿದೆ. ಇನ್ನು16,992 ಸಕ್ರೀಯ ಪ್ರಕರಣಗಳಿವೆ.


ರಾಜ್ಯಾದ್ಯಂತ ಇಂದು 1,69,448 ಕೋವಿಡ್ ಟೆಸ್ಟ್ ನಡೆಸಲಾಗಿದ್ದು, 1,074 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 0.63ಕ್ಕೆ ಇಳಿದಿದೆ. ರಾಜ್ಯದ ಐದು ಜಿಲ್ಲೆಗಳಾದ ಬಾಗಲಕೋಟೆ, ಬೀದರ್, ಹಾವೇರಿ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-0, ಬಳ್ಳಾರಿ-5, ಬೆಳಗಾವಿ-8, ಬೆಂಗಳೂರು ಗ್ರಾಮಾಂತರ-5, ಬೆಂಗಳೂರು ನಗರ-343, ಬೀದರ್-0, ಚಾಮರಾಜನಗರ-2, ಚಿಕ್ಕಬಳ್ಳಾಪುರ-5, ಚಿಕ್ಕಮಗಳೂರು-68, ಚಿತ್ರದುರ್ಗ-8, ದಕ್ಷಿಣ ಕನ್ನಡ-176, ದಾವಣಗೆರೆ-3, ಧಾರವಾಡ-7, ಗದಗ-0, ಹಾಸನ-81, ಹಾವೇರಿ-0, ಕಲಬುರಗಿ-7, ಕೊಡಗು-59, ಕೋಲಾರ-12, ಕೊಪ್ಪಳ-0, ಮಂಡ್ಯ-15, ಮೈಸೂರು-48, ರಾಯಚೂರು-6, ರಾಮನಗರ-2, ಶಿವಮೊಗ್ಗ-39, ತುಮಕೂರು-22, ಉಡುಪಿ-126, ಉತ್ತರ ಕನ್ನಡ-25, ವಿಜಯಪುರ-1, ಯಾದಗಿರಿ-1.


Read More ಮುಂದೆ ಓದಿ

Previous Post Next Post