ಕೊವಿಡ್ 19- ಇಂದು ರಾಜ್ಯದಲ್ಲಿ 803 ಪಾಸಿಟಿವ್, 802 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ
ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 803 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 29,61,735 ಕ್ಕೆ ಏರಿಕೆಯಾಗಿದೆ. ಇವತ್ತು 802 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 29,07,548 ಜನ ಗುಣಮುಖರಾಗಿದ್ದಾರೆ.
ಜಿಲ್ಲೆಗಳಲ್ಲಿ ಸೋಂಕಿತರ ವಿವರ:
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 255 ಜನರಿಗೆ ಸೋಂಕು ತಗುಲಿದ್ದು 6 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 107 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, 7321 ಸಕ್ರಿಯ ಪ್ರಕರಣಗಳು ಇವೆ.
ಬಾಗಲಕೋಟೆ 1, ಬಳ್ಳಾರಿ 4, ಬೀದರ್ 0, ಚಿಕ್ಕಬಳ್ಳಾಪುರ 2, ಚಿತ್ರದುರ್ಗ 4, ಗದಗ 0, ಹಾವೇರಿ 1, ಕಲಬುರ್ಗಿ 2, ಕೊಪ್ಪಳ 0, ರಾಯಚೂರು 2, ರಾಮನಗರ 1, ವಿಜಯಪುರ 0, ಯಾದಗಿರಿ 0, ಬೆಂಗಳೂರು ನಗರ 255, ದಕ್ಷಿಣಕನ್ನಡ 153, ಕೊಡಗು 63, ಉಡುಪಿ 90 ಹೊಸ ಪ್ರಕರಣ ವರದಿಯಾಗಿವೆ.