ಆರು ಜಿಲ್ಲೆಗಳಲ್ಲಿ ಶೂನ್ಯ, ರಾಜ್ಯದಲ್ಲಿ ಇಂದು 801ಪಾಸಿಟಿವ್, ರಾಜ್ಯದಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳು 16672

ಆರು ಜಿಲ್ಲೆಗಳಲ್ಲಿ ಶೂನ್ಯ, ರಾಜ್ಯದಲ್ಲಿ ಇಂದು 801ಪಾಸಿಟಿವ್, ರಾಜ್ಯದಲ್ಲಿರುವ ಒಟ್ಟು ಸಕ್ರಿಯ ಪ್ರಕರಣಗಳು 16672


ಬೆಂಗಳೂರು:
 ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಪ್ರಮಾಣ ಇಳಿಮುಖವಾಗಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 801 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗುಲಿದೆ ಹಾಗೂ 15 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.11) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.


ವರದಿಗಳ ಪ್ರಕಾರ 1142 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2906746 ತಲುಪಿದೆ.


ಇನ್ನು ರಾಜ್ಯದಲ್ಲಿಂದು ಒಟ್ಟು ಸಕ್ರಿಯ ಪ್ರಕರಣ ಸಂಖ್ಯೆ 16672 ಇದೆ. ಪಾಸಿಟಿವಿಟಿ ದರ 0.67 % ಹಾಗೂ ಡೆತ್ ರೇಟ್ 1.87 % ಇದೆ.


ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ-1, ಬಳ್ಳಾರಿ-4, ಬೆಳಗಾವಿ-93, ಬೆಂಗಳೂರು ಗ್ರಾಮಾಂತರ-207, ಬೀದರ್-2, ಚಾಮರಾಜನಗರ-6, ಚಿಕ್ಕಬಳ್ಳಾಪುರ-0, ಚಿಕ್ಕಮಗಳೂರು-39, ಚಿತ್ರದುರ್ಗ-2, ದಕ್ಷಿಣ ಕನ್ನಡ-133, ದಾವಣಗೆರೆ-8, ಧಾರವಾಡ-1, ಗದಗ-0, ಹಾಸನ-17, ಹಾವೇರಿ-0, ಕಲಬುರಗಿ-6, ಕೊಡಗು-59, ಕೋಲಾರ-2, ಕೊಪ್ಪಳ-1, ಮಂಡ್ಯ-12, ಮೈಸೂರು-47, ರಾಯಚೂರು-2, ರಾಮನಗರ-0, ಶಿವಮೊಗ್ಗ-30, ತುಮಕೂರು-26, ಉಡುಪಿ-86, ಉತ್ತರ ಕನ್ನಡ-11, ವಿಜಯಪುರ-0, ಯಾದಗಿರಿ-0.


Read More ಮುಂದೆ ಓದಿ

Previous Post Next Post