ಇಂದು ರಾಜ್ಯ ಎಸ್ಸೆಸ್ಸೆಫ್ ನಿಂದ ರೂಟ್ ಆಫ್ ರೂಟ್ ಕಾರ್ಯಕ್ರಮ
ಸೆ:19: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಎಸ್ಸೆಸ್ಸೆಪ್ ಧ್ವಜ ದಿನದ ಪ್ರಯುಕ್ತ ಸಂಘಟನೆಗೆ ನಾಯಕತ್ವ ನೀಡಿ ಸಂಘಟನೆಯನ್ನು ಕಟ್ಟಿ ಬೆಳೆಸಿದ ಪೂರ್ವಿಕರು ನಾಯಕರು ಹಾಗೂ ನವ ನಾಯಕರ ಸಮಾಗಮ ರೂಟ್ ಆಫ್ ರೂಟ್ ಕಾರ್ಯಕ್ರಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿಮೊಗ್ಗರವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 19 SSF ಧ್ವಜ ದಿನವಾದ ಇಂದು ಆದಿತ್ಯವಾರ ಸಂಜೆ 3:00 ಗಂಟೆಗೆ ಅಲ್ ಮದೀನಾ ಮಂಜನಾಡಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಹುಸೈನ್ ಸಅದಿ ಕೆ.ಸಿ.ರೋಡ್, ಕಾವಲ್ಕಟ್ಟೆ ಹಝ್ರತ್, ಎಸ್.ಪಿ ಹಂಝ ಸಖಾಫಿ, ಜಿ.ಎಂ ಮಹಮ್ಮದ್ ಕಾಮಿಲ್ ಸಖಾಫಿ, ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಪಿ, ಮೌಲಾನಾ ಶಾಫಿ ಸಅದಿ ಬೆಂಗಳೂರು, ಹಫೀಳ್ ಸಅದಿ ಮಡಿಕೇರಿ, ಕೆ.ಎಂ ಅಬೂಬಕ್ಕರ್ ಸಿದ್ದೀಕ್, ಪಿ.ಪಿ ಮಹಮ್ಮದ್ ಸಖಾಫಿ, ಇಸ್ಮಾಯಿಲ್ ಸಖಾಫಿ ಕೊಡಗು, ಕೆ.ಕೆ.ಎಂ ಕಾಮಿಲ್ ಸಖಾಫಿ ಸುರಿಬೈಲು, ಹಸೈನಾರ್ ಆನೆಮಹಲ್ ಮುಂತಾದ ಸಂಘಟನಾ ನಾಯಕರು ಭಾಗವಹಿಸಲಿದ್ದಾರೆ.
1989 ರಂದು ಅಸ್ತಿತ್ವಕ್ಕೆ ಬಂದ ಎಸ್ಸೆಸ್ಸೆಫ್ ಇಂದು ತನ್ನ ಮೂವತ್ತಮೂರು ಸಂವತ್ಸರಗಳನ್ನು ಪೂರೈಸುತ್ತಿದೆ. ಕಲ್ಲುಮುಳ್ಳಿನ ಹಾದಿಯಲ್ಲಿ ಸಾಗಿಬಂದ ಎಸ್ಸೆಸ್ಸೆಫ್ ಇಂದು ರಾಷ್ಟ್ರದ ಉದ್ದಗಲಕ್ಕೂ ಪಸರಿಸಿ ಸಾಮಾಜಿಕ ಶೈಕ್ಷಣಿಕ ರಂಗಗಳಲ್ಲಿ ಜನಮೆಚ್ಚಿದ ಸೇವೆಯನ್ನು ಮಾಡುತ್ತಿದೆ.