ನಾಳೆ ಭಾರತ ಬಂದ್: ರಾಜ್ಯದ ರೈತ ಸಂಘಟನೆಗಳಿಂದ ಬೆಂಬಲ

ನಾಳೆ ಭಾರತ ಬಂದ್: ರಾಜ್ಯದ ರೈತ ಸಂಘಟನೆಗಳಿಂದ ಬೆಂಬಲ


ಬೆಂಗಳೂರು 
: ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಸೋಮವಾರ ಭಾರತ ಬಂದ್‌ಗೆ ಕರೆ ನೀಡಿದ್ದು, ರಾಜ್ಯದಲ್ಲಿ ರೈತ ಸಂಘಟನೆಗಳು, ಕಾರ್ಮಿಕ, ದಲಿತ, ಕನ್ನಡಪರ ಮತ್ತು ವಿದ್ಯಾರ್ಥಿ ಸಂಘಟನೆಗಳು ಬೆಂಬಲ ನೀಡಿವೆ.

ವರ್ತಕರು, ಆಟೋ ಚಾಲಕರು, ಟ್ಯಾಕ್ಸಿ ಚಾಲಕರು, ವರ್ತಕರ ಸಂಘಗಳು ಕೂಡ ಕೈ ಜೋಡಿಸಲಿವೆ.


ಬಂದ್‌ಗೆ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ನೈತಿಕ ಬೆಂಬಲ ಸೂಚಿಸಿವೆ. ಹೊಟೇಲ್‌ ಉದ್ಯಮ ಬೆಂಬಲ ಸೂಚಿಸಿಲ್ಲ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬಿಎಂಟಿಸಿ, ಮೆಟ್ರೋ ಸಂಚಾರ ಸಂಚಾರ ಇರುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಬಸ್‌ ಮಾಲಕರ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಹೀಗಾಗಿ ಸಂಚಾರ ಎಂದಿನಂತೆ ಇರಲಿದೆ.


ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಸೋಮವಾರ (ಸೆ.27) ಕರ್ನಾಟಕದಲ್ಲಿ ಏನಿರುತ್ತೆ, ಏನಿರಲ್ಲ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಏನಿರುತ್ತೆ? ಏನಿರಲ್ಲ?

KSRTC - ಇರುತ್ತೆ

BMTC - ಇರುತ್ತೆ

ಮೆಟ್ರೋ - ಇರುತ್ತೆ

ಆಟೋ - ಇರುತ್ತೆ

ಟ್ಯಾಕ್ಸಿ - ಇರುತ್ತೆ

ಕ್ಯಾಬ್​​ - ಇರುತ್ತೆ

ಹೋಟೆಲ್​ - ಇರುತ್ತೆ

ಬೀದಿಬದಿ ವ್ಯಾಪಾರ - ಇರುತ್ತೆ

ಶಾಲಾ-ಕಾಲೇಜು - ಇರುತ್ತೆ

ನೈತಿಕ ಬೆಂಬಲ ಯಾರದ್ದು?

ಸಂಯುಕ್ತ ಕಿಸಾನ್​ ಮೋರ್ಚಾ - ನೈತಿಕ ಬೆಂಬಲ
ರಾಜ್ಯ ರೈತ ಸಂಘ - ನೈತಿಕ ಬೆಂಬಲ
ರಾಜ್ಯ ಹಸಿರು ಸೇನೆ - ನೈತಿಕ ಬೆಂಬಲ
ರಾಜ್ಯ ಪ್ರಾಂತ ರೈತ ಸಂಘ - ನೈತಿಕ ಬೆಂಬಲ
ರೈತ ಕಾರ್ಮಿಕರ ಸಂಘ - ನೈತಿಕ ಬೆಂಬಲ
ಅಖಿಲ ಭಾರತ್​ ಕಿಸಾನ್​ ಸಭಾ - ನೈತಿಕ ಬೆಂಬಲ
ಆಟೋ ಮಾಲೀಕರು - ನೈತಿಕ ಬೆಂಬಲ
ಕ್ಯಾಬ್ ಚಾಲಕರ ಸಂಘ - ನೈತಿಕ ಬೆಂಬಲ
ಬ್ಯಾಂಕ್ ಒಕ್ಕೂಟ - ನೈತಿಕ ಬೆಂಬಲ

Previous Post Next Post