ಸುಳ್ಯ: ಎಸ್ಸೆಸ್ಸೆಫ್ ರಾಜ್ಯ ಅರ್ಧವಾರ್ಷಿಕ ಕೌನ್ಸಿಲ್ ಗೆ ಪ್ರೌಢ ಸಮಾಪ್ತಿ

ಸುಳ್ಯ: ಎಸ್ಸೆಸ್ಸೆಫ್ ರಾಜ್ಯ ಅರ್ಧವಾರ್ಷಿಕ ಕೌನ್ಸಿಲ್ ಗೆ ಪ್ರೌಢ ಸಮಾಪ್ತಿ 

ಸುಳ್ಯ: ಎಸ್ಸೆಸ್ಸೆಫ್ ರಾಜ್ಯ ಅರ್ಧವಾರ್ಷಿಕ ಕೌನ್ಸಿಲ್ 'ರಿವ್ಯೂ' ರಾಜ್ಯಾಧ್ಯಕ್ಷರು ಅಬ್ದುಲ್ಲತೀಫ್ ಸಅದಿ ಅವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 26 ಬಾನುವಾರ ಬೆಳಿಗ್ಗೆ ಹತ್ತರಿಂದ ಬೆಳ್ಳಾರೆ ದಾರುಲ್ ಹುದಾ ದಲ್ಲಿ ನಡೆಯಿತು.


ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎಸ್ ಪಿ ಹಂಝ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಅಧ್ಯಕ್ಷರು ಡಾಕ್ಟರ್ ಫಾರೂಖ್ ನಈಮಿ ವಿಷಯ ಮಂಡಿಸಿದರು. ಎಸ್ಸೆಸ್ಸೆಫ್ ರಾಷ್ಟ್ರಮಟ್ಟದಲ್ಲಿ ಗಟ್ಟಿಗೊಳ್ಳುತ್ತಿದೆ. ಸಂಘಟನೆಯ ಬಲಿಷ್ಠತೆಗೆ ಪ್ರತಿಯೊಬ್ಬರು ಶ್ರಮಿಸಬೇಕು. ಭಾರತದಲ್ಲಿ ಭರವಸೆ ಮೂಡಿಸಿದ ಏಕೈಕ ಸುನ್ನಿ ವಿದ್ಯಾರ್ಥಿ ಸಂಘಟನೆ ಎಸ್ಸೆಸ್ಸೆಫ್ ಮಾತ್ರ. ಇದರ ಬಲವರ್ಧನೆ ಕಾಲದ ಅನಿವಾರ್ಯ ಎಂದು ರಾಷ್ಟ್ರೀಯ ಅಧ್ಯಕ್ಷರು ಹೇಳಿದರು.  


ಕಾರ್ಯಕ್ರಮದಲ್ಲಿ ಬೆಳ್ಳಾರೆ ದಾರುಲ್ ಹುದಾ ಸಂಸ್ಥೆಯ ಮ್ಯಾನೇಜರ್ ಖಲೀಲ್ ಹಿಮಮಿ ಸಖಾಫಿ, ಸ್ವಾಗತ ಸಮಿತಿ ಅಧ್ಯಕ್ಷ ಹಮೀದ್ ಅಲ್ಫ, ಕನ್ವೀನರ್ ಶಂಸುದ್ದೀನ್ ಝಂಝಂ, ಕೋಶಾಧಿಕಾರಿ ಇಬ್ರಾಹೀಂ, ಸದಸ್ಯರಾದ ಅಯ್ಯೂಬ್ ಟಿಎಂ,  ಮಹ್ಮೂದ್ ಶಾಹಿನ್ ಮಾಲ್,  ಏಕೆ ಕಟ್ಟೆಕ್ಕಾರ್, ಸಿದ್ದೀಕ್ ಹಿಮಮಿ ಪೈಂಬಚ್ಚಾಲ್, ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ಹಾಫಿಝ್ ಸುಫಿಯಾನ್ ಸಖಾಫಿ, ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ, ಕಾರ್ಯದರ್ಶಿಗಳಾದ ಕೆಎಂ ಮುಸ್ತಫಾ ಹಿಮಮಿ ನಈಮಿ, ಹುಸೈನ್ ಸಅದಿ ಹೊಸ್ಮಾರ್, ಸಫ್ವಾನ್ ಚಿಕ್ಕಮಗಳೂರು, ಶರೀಫ್ ಕೊಡಗು, ಮುಬಶ್ಶಿರ್ ಅಹ್ಸನಿ ಕೊಡಗು, ಎನ್ ಸಿ ರಹೀಮ್, ವಾಜಿದ್ ಹಾಸನ, ನವಾಝ್ ಭಟ್ಕಳ, ಹಕೀಮ್ ಬೆಂಗಳೂರು ಹಾಗು ರಾಜ್ಯ ಸದಸ್ಯರುಗಳು, ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ಕೌನ್ಸಿಲರ್ ಗಳು ಭಾಗವಹಿಸಿದರು.   

ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು ಮತ್ತು ಕೊನೆಯಲ್ಲಿ ವಂದಿಸಿದರು.

Previous Post Next Post