ಕರ್ನಾಟಕದ 31 ನೇ ಜಿಲ್ಲೆಯಾಗಿ ವಿಜಯ ನಗರ ಅಧಿಕೃತ ಘೋಷಣೆ

ಕರ್ನಾಟಕದ 31 ನೇ ಜಿಲ್ಲೆಯಾಗಿ ವಿಜಯ ನಗರ ಅಧಿಕೃತ ಘೋಷಣೆ


ವಿಜಯನಗರ : ಕರ್ನಾಟಕದ 31 ನೇ ಜಿಲ್ಲೆಯಾಗಿ 'ವಿಜಯನಗರ' ಉದಯವಾಗಿದ್ದು, ನೂತನ 'ವಿಜಯನಗರ' ಜಿಲ್ಲೆಯನ್ನು ದೀಪ ಬೆಳಗಿಸುವುದರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದಾರೆ.

ಜಿಲ್ಲೆಯ ಹೊಸಪೇಟೆಯಲ್ಲಿ ಕ್ರೀಡಾಂಗಣದಲ್ಲಿ ಅದ್ದೂರಿ ಉದ್ಘಾಟನಾ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ವಿವಿಧ ಮಠದ ಸ್ವಾಮೀಜಿ, ಗಣ್ಯರು ಉಪಸ್ಥಿತರಿದ್ದಾರೆ.


ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅದ್ದೂರಿ ಕಾರ್ಯಕ್ರಮದಲ್ಲಿ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಈ ಮೊದಲು ಬಳ್ಳಾರಿಗೆ ಸೇರಿದ್ದ ಹೊಸಪೇಟೆ, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳು ವಿಜಯನಗರ ನೂತನ ಜಿಲ್ಲೆಯಲ್ಲಿ ಇರಲಿವೆ.


ಇದುವರೆಗೆ ಬಳ್ಳಾರಿ ಜಿಲ್ಲೆಯೊಂದಿಗೆ ಸೇರಿಕೊಂಡಿದ್ದಂತ ವಿಜಯನಗರವು, ಇಂದು ನೂತನ ಜಿಲ್ಲೆಯಾಗಿ ಉದಯವಾಗಿದೆ. ಈ ಮೂಲಕ 6 ತಾಲೂಕುಗಳ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಜಿಲ್ಲೆಗೆ ಇಂದು ಅಧಿಕೃತವಾಗಿ ಚಾಲನೆ ಸಿಕ್ಕಿದೆ .Previous Post Next Post