ಕೊವಿಡ್ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ

ಕೊವಿಡ್ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ
ಭಾನುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳಲ್ಲಿ 12,830 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 247 ದಿನಗಳಲ್ಲಿ ದಾಖಲಾದ ಅತಿ ಕಡಿಮೆ ಸಂಖ್ಯೆಯ ಪ್ರಕರಣಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಭಾನುವಾರ ನವೀಕರಿಸಿದ ದತ್ತಾಂಶದ ಪ್ರಕಾರ, ಭಾರತದ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 3,42,73,300 ಕ್ಕೆ ಏರಿಕೆಯಾಗಿದೆ.


ಆದರೆ, ಕೋವಿಡ್‌ ಸಕ್ರಿಯ ಪ್ರಕರಣಗಳು 1,59,272 ಕ್ಕೆ ಇಳಿಕೆಯಾಗಿದೆ. 446 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 4,58,186 ತಲುಪಿದೆ.


126 ದಿನಗಳಿಂದ ದೈನಂದಿನ ಕೋವಿಡ್‌ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕಡಿಮೆ ಇದೆ. ಒಟ್ಟು ಸೋಂಕುಗಳಲ್ಲಿ ಸಕ್ರಿಯ ಪ್ರಕರಣಗಳು ಶೇ 0.46 ಇದೆ. ಇದು 2020ರ ಮಾರ್ಚ್‌ನಿಂದ ದಾಖಲಾದ ಪ್ರಕರಣಗಳಲ್ಲೇ ಕಡಿಮೆಯದ್ದಾಗಿದೆ. ಚೇತರಿಕೆ ಪ್ರಮಾಣವು ಶೇ 98.20 ರಷ್ಟಿದೆ ಎಂದು ಸಚಿವಾಲಯ ಹೇಳಿದೆ.

أحدث أقدم