ನೋರ್ತ್ ಝೋನ್ ಪ್ರತಿಭೋತ್ಸವ ಇಂದಿನಿಂದ
ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಪ್ರತಿ ಎರಡು ವರ್ಷಗಳಿಗೊಮ್ಮೆ ಹಮ್ಮಿಕೊಂಡು ಬರುತ್ತಿರುವ ಸುನ್ನಿ ಕರ್ನಾಟಕದ ಅತಿ ದೊಡ್ಡ ವಿದ್ಯಾರ್ಥಿ ಸಾಹಿತ್ಯ ಕಲಾ ಉತ್ಸವ 'ಪ್ರತಿಭೋತ್ಸವ- 2021' ಇದರ ಉತ್ತರ ಕರ್ನಾಟಕದ ಹನ್ನೆರಡು ಜಿಲ್ಲೆಗಳ ನ್ನೊಳಗೊಂಡ ನೋರ್ತ್ ಪ್ರತಿಭೋತ್ಸವ ಇಂದಿನಿಂದ ವಿಜಯನಗರ ಜಿಲ್ಲೆಯ ಹಡಗಲಿಯ ಮಸ್ದರ್ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಪ್ರತಿಭೆಗಳು ನಾಳೆಯ ನೀರೀಕ್ಷೆಯ ನೀಲನಕ್ಷೆಗಳು. ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವುದು ಸಮಾಜದ ಕರ್ತವ್ಯ. ಈ ನಿಟ್ಟಿನಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡ ಪ್ರತಿಭೋತ್ಸವದ ಉತ್ತರ ಕರ್ನಾಟಕದ ಹನ್ನೆರಡು ಜಿಲ್ಲೆಗಳಿಂದ ಆಯ್ಕೆಯಾದ ಪ್ರತಿಭೆಗಳ ಸ್ಪರ್ಧೆ ಇಂದು ಮತ್ತು ನಾಳೆ (ನ.20, 21) ಎರಡು ದಿನಗಳಲ್ಲಿ ಮಸ್ದರ್ ಕ್ಯಾಂಪಸ್ ನಲ್ಲಿ ನಡೆಯಲಿದ್ದು, ಅಲ್ಲಿಂದ ಆಯ್ಕೆಯಾದ ವಿದ್ಯಾರ್ಥಿಗಳು ನ. 26-27 ರಂದು ನಡೆಯುವ ರಾಜ್ಯ ಮಟ್ಟದ ಪ್ರತಿಭೋತ್ಸವ ದಲ್ಲಿ ಭಾಗವಹಿಸಲಿದ್ದಾರೆ.