'ಕರ್ನಾಟಕ ಬಂದ್' ವಾಪಸ್ ಪಡೆದ ಕನ್ನಡ ಪರ ಸಂಘಟನೆಗಳು

'ಕರ್ನಾಟಕ ಬಂದ್' ವಾಪಸ್ ಪಡೆದ ಕನ್ನಡ ಪರ ಸಂಘಟನೆಗಳು 


ಬೆಂಗಳೂರು, (ಡಿ.30): ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ವಾಪಸ್ ಪಡೆದಿದ್ದಾರೆ. ರಾಜ್ಯದಲ್ಲಿ ಎಂಇಎಸ್ (MES) ಬ್ಯಾನ್ ಮಾಡುವಂತೆ ಒತ್ತಾಯಿಸಿ ನಾಳೆ ಅಂದ್ರೆ ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದರು.


ಆದ್ರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನವಿ ಮೇರೆಗೆ ವಾಟಾಳ್ ನಾಗರಾಜ್ ಬಂದ್ ವಾಪಸ್ ಪಡೆದುಕೊಂಡಿದ್ದಾರೆ.


ಪ್ರವೀಣ್ ಶೆಟ್ಟಿ ಹಾಗೂ ಕರವೇ ಅಧ್ಯಕ್ಷ ನಾರಾಯಣಗೌಡ ಅವರಿಗೂ ಸಹ ಸಿಎಂ ಬೊಮ್ಮಾಯಿ ಕರ್ನಾಟಕ ಬಂದ್ ಕೈಬಿಡುವಂತೆ ಮನವಿ ಮಾಡಿದ್ದರು. ಈಗಾಗಲೇ ಕೋವಿಡ್‌ನಿಂದ ಬಹಳಷ್ಟು ನಷ್ಟವಾಗಿ.ಈಗ ಮತ್ತೆ ಬಂದ್‌ನಿಂದ ಮತ್ತಷ್ಟು ಕರ್ನಾಟಕದ ಜನರಿಗೆ ಹೊಡೆತಬೀಳಲಿದೆ ಎಂದು ಮನವಿ ಮಾಡಿದ್ದರು. ಈ ಮನವಿಗೆ ಕನ್ನಡಪರ ಸಂಘಟನೆಗಳು ಸ್ಪಂದಿಸಿದ್ದು ಬಂದ್‌ ಕೈಬಿಟ್ಟಿವೆ.


ಮುಂದೆ ಓದಿ

Previous Post Next Post