ನಾಳೆಯಿಂದ ಮಕ್ಕಳಿಗೂ ಕೊವಿಡ್ ಲಸಿಕೆ ಆರಂಭ: ಮಕ್ಕಳ ಪೋಷಕರಿಗೆ ಲಸಿಕಾಕರಣದ ಬಗ್ಗೆ ಮಹತ್ವದ ಮಾಹಿತಿ
ಈ ಮಾರ್ಗಸೂಚಿಯಲ್ಲಿ ಏನಿದೆ..? ಲಸಿಕಾಕರಣದ ಬಗ್ಗೆ ಮಕ್ಕಳ ಪೋಷಕರಿಗೆ ಮಹತ್ವದ ಆ ಮಾಹಿತಿ ಮುಂದೆ ಓದಿ
ನಾಳೆಯಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಿಡ್ ಲಸಿಕೆಯನ್ನು ಪ್ರಾರಂಭಿಸಲಾಗುವುದು. ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಲಸಿಕೆಯನ್ನು (Bharat Biotech's Covaxin ) ಮಕ್ಕಳಿಗೆ ನಾಳೆಯಿಂದ ನೀಡೋದಕ್ಕೆ ಆರಂಭಿಸಲಾಗುತ್ತಿದೆ.
15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲರೂ (ಅವರ ಜನ್ಮ ವರ್ಷ 2007 ಅಥವಾ ಅದಕ್ಕೂ ಮೊದಲು) ಸಹ ಕೋವಿನ್ ಆಯಪ್ ನಲ್ಲಿ (Co-WIN ) ನೋಂದಾಯಿಸಲು ಸಾಧ್ಯವಾಗುತ್ತದೆ.
ಫಲಾನುಭವಿಗಳು ಕೋ-ವಿನ್ ನಲ್ಲಿ ಅಸ್ತಿತ್ವದಲ್ಲಿರುವ ಖಾತೆಯ ಮೂಲಕ ಆನ್ ಲೈನ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಳ್ಳಬಹುದು. ಇದಲ್ಲದೇ ಹೊಸದಾಗಿ ಮೊಬೈಲ್ ಸಂಖ್ಯೆಯ ಮೂಲಕ ಹೊಸ ಖಾತೆಯನ್ನು ರಚಿಸಿ ನೋಂದಾಯಿಸಬಹುದು. ಈ ಸೌಲಭ್ಯವು ಪ್ರಸ್ತುತ ಎಲ್ಲಾ ಅರ್ಹ ನಾಗರಿಕರಿಗೆ ಲಭ್ಯವಿದೆ.
ಮಕ್ಕಳು ಅನುಕೂಲಕರ ನೋಂದಣಿ ಮೋಡ್ ನಲ್ಲಿ ವೆರಿಫೈಯರ್ /ಲಸಿಕೆದಾರರಿಂದ ಆನ್ ಸೈಟ್ ನಲ್ಲಿ ನೋಂದಾಯಿಸಬಹುದು. ಅಪಾಯಿಂಟ್ಮೆಂಟ್ ಗಳನ್ನು ( Appointments ) ಆನ್ ಲೈನ್ ಅಥವಾ ಆನ್ ಸೈಟ್ ನಲ್ಲಿ ಕಾಯ್ದಿರಿಸಬಹುದು ( Online or Onsite). ಅಂದ್ರೇ ವಾಕ್ ಇನ್ ಮೂಲಕವೂ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆಗಾಗಿ ನೋಂದಣಿ ಮಾಡಿಕೊಂಡು ಲಸಿಕೆ ಹಾಕಿಸಿಕೊಳ್ಳಬಹುದು. ಎರಡನೇ ಡೋಸ್ ಗೆ ಸಮಯದ ಮಧ್ಯಂತರವನ್ನು 28 ದಿನಗಳಲ್ಲಿ ನಿಗದಿಪಡಿಸಲಾಗಿದೆ.
ಅಂದಹಾಗೇ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 25 ರಂದು ಮಕ್ಕಳಿಗೆ ಲಸಿಕೆ ಮತ್ತು ಮುಂಚೂಣಿ ಕಾರ್ಮಿಕರಿಗೆ ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋಮೊರ್ಬಿಡಿಟಿಯೊಂದಿಗೆ ಬೂಸ್ಟರ್ ಡೋಸ್ ನೀಡುವುದಾಗಿ ಘೋಷಿಸಿದ್ದರು. ಒಮೈಕ್ರಾನ್ ಎಂಬ ಹೊಸ ಹೆಚ್ಚು ಟ್ರಾನ್ಸ್ ಮಿಸಿಬಲ್ ರೂಪಾಂತರದಿಂದಾಗಿ ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.