ಕೊರೊನ ಆತಂಕದ ನಡುವೆ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಕೊರೊನ ಆತಂಕದ ನಡುವೆ ಎಸ್ಸೆಸ್ಸೆಲ್ಸಿ ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಪ್ರಕಟ 


ಬೆಂಗಳೂರು: ಕೊರೋನಾ ( Coronavirus ) ಹಾಗೂ ಓಮಿಕ್ರಾನ್ ವೈರಸ್ ಸೋಂಕಿನ ಭೀತಿಯ ನಡುವೆಯೂ ಎಸ್ ಎಸ್ ಎಲ್ ಸಿ ತರಗತಿಗಳು ರಾಜ್ಯದಲ್ಲಿ ನಡೆಯುತ್ತಿವೆ. 
ಈ ಸೋಂಕಿನ ಆರ್ಭಟದ ನಡುವೆಯೂ 2022ನೇ ಸಾಲಿನ SSLC ಪೂರ್ವಸಿದ್ಧತಾ ಪರೀಕ್ಷೆಯನ್ನು ( SSLC Preparatory Exam ) ನಡೆಸೋದಕ್ಕೆ ದಿನಾಂಕವನ್ನು ಪ್ರಕಟಿಸಿದೆ.


ಈ ಸಂಬಂಧ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವೇಳಾಪಟ್ಟಿ ಪ್ರಕಟಿಸಿದ್ದು, ಫೆಬ್ರವರಿ 2022ರ ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯ ( SSLC Exam ) ವೇಳಾಪಟ್ಟಿ ಈ ಕೆಳಗಿನಂತೆ ಪ್ರಕಟಿಸಿದೆ.

SSLC ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿ

  • ದಿನಾಂಕ 21-02-2022ರ ಸೋಮವಾರ - ಪ್ರಥಮ ಭಾಷೆ - ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್(NCERT), ಸಂಸ್ಕೃತ
  • ದಿನಾಂಕ 22-02-2022, ಮಂಗಳವಾರ - ಕೋರ್ ಸಬ್ಜೆಕ್ಟ್ - ಸಮಾಜ ವಿಜ್ಞಾನ
  • ದಿನಾಂಕ 23-02-2022, ಬುಧವಾರ - ದ್ವಿತೀಯ ಭಾಷೆ - ಇಂಗ್ಲೀಷ್, ಕನ್ನಡ
  • ದಿನಾಂಕ 24-02-2022, ಗುರುವಾರ - ಕೋರ್ ಸಬ್ಜೆಕ್ಟ್ - ಗಣಿತ
  • ದಿನಾಂಕ 25-02-2022, ಶುಕ್ರವಾರ - ತೃತೀಯ ಭಾಷೆ - ಹಿಂದಿ (NCERT), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು
  • ದಿನಾಂಕ 26-02-2022, ಶನಿವಾರ - ಕೋರ್ ಸಬ್ಜೆಕ್ಟ್ - ವಿಜ್ಞಾನ
Previous Post Next Post