ರಾಜ್ಯದಲ್ಲಿ ಶೀತ, ಜ್ವರ ಜಾಸ್ತಿ ಇದೆ, ಇದೊಂದು ಸಾಮಾನ್ಯವಾದ ಪ್ರಕ್ರಿಯೆ, ಭಯ ಪಡುವ ಅಗತ್ಯವಿಲ್ಲ: ಆರೋಗ್ಯ ಸಚಿವ ಡಾ. ಸುಧಾಕರ್

ರಾಜ್ಯದಲ್ಲಿ ಶೀತ, ಜ್ವರ ಜಾಸ್ತಿ ಇದೆ, ಇದೊಂದು ಸಾಮಾನ್ಯವಾದ ಪ್ರಕ್ರಿಯೆ, ಭಯ ಪಡುವ ಅಗತ್ಯವಿಲ್ಲ: ಆರೋಗ್ಯ ಸಚಿವ ಡಾ. ಸುಧಾಕರ್


ಬೆಂಗಳೂರು: ರಾಜ್ಯದಲ್ಲಿ ಶೀತ, ಜ್ವರ ಜಾಸ್ತಿ ಇದೆ. ಇದೊಂದು ಸಾಮಾನ್ಯವಾದ ಪ್ರಕ್ರಿಯೆ ಆಗಿದ್ದು, ಭಯಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯದಲ್ಲಿ ನೆಗಡಿ, ಶೀತ ಹೆಚ್ಚಳ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇದು ಸೀಸನಲ್ ಫ್ಲೋ. ಡಿಸೆಂಬರ್ ನಿಂದ ಫೆಬ್ರವರಿವರೆಗೂ ಪ್ರತಿ ವರ್ಷ ಅದು ಇರುತ್ತೆ. ಸಾರಿ ಮತ್ತು ILI ಕೇಸ್ ಅವು. ಈ ಲಕ್ಷಣ ಇರೋರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡ್ತಿದ್ದೇವೆ. ಬೇರೆ ರಾಜ್ಯಕ್ಕೆ ಹೋಲಿಸಿದರೆ ನಾವು ಹೆಚ್ಚು ಟೆಸ್ಟ್ ಮಾಡುತ್ತಿದ್ದೇವೆ. ಬೇರೆ ರಾಜ್ಯದಲ್ಲಿ ಒಂದು ರಾಜ್ಯ ಕಡಿಮೆ 35 ಸಾವು ತೋರಿಸಿದ್ದಾರೆ. ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಆಸ್ಪತ್ರೆಗೆ ಸೆರೋರ ಪ್ರಮಾಣವೂ ಕಡಿಮೆ ಇದೆ. ನಾವು ಮುಂಚಿತವಾಗಿ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ತಿರೋದ್ರಿಂದ ನಮ್ಮಲ್ಲಿ ನಿಯಂತ್ರಣದಲ್ಲಿ ಇದೆ ಎಂದರು.


ಜನಸಾಮಾನ್ಯರಿಗೆ ವೈದ್ಯರ ಸಲಹೆ.!

ಸಾಮಾನ್ಯ ನೆಗಡಿ, ಕೆಮ್ಮು, ಜ್ವರಕ್ಕೆ ಹೆದರಿ ಸಿಕ್ಕ ಸಿಕ್ಕ ಮಾತ್ರೆ ತಿನ್ನಬೇಡಿ. ಸುಮ್ಮನೆ ಸಿಟಿ ಸ್ಕ್ಯಾನ್, ಎಕ್ಸರೇ ಏನು ಬೇಡಿಸ ಬೇಡಿ ಇದ್ರಿಂದ ಸಮಸ್ಯೆ ಹೆಚ್ಚಾಗುತ್ತೆ. ಯಾರು ಕೊರೋನಾಲಸಿಕೆ ಹಾಕಿಸಿಕೊಂಡಿಲ್ಲವೋ ಅವರಿಗೆ ಕೊರೋನಾ ಬಂದ್ರೆ ಸ್ಥಿತಿ ಬಿಗಡಾಯಿಸುತ್ತೆ. ಮೊದಲ ವಾರ ಕೊರೋನಾದಿಂದ ಯಾವ ಅಪಾಯ ಆಗಲ್ಲ. ಎರಡನೇ ವಾರದಲ್ಲಿ ಜ್ವರ ಹೆಚ್ಚಾದ್ರೆ ಆಸ್ಪತ್ರೆಗೆ ಹೋಗಿ, ಲಸಿಕೆ ಹಾಕಿಸಿಕೊಂಡವರಲ್ಲಿ ಕೊರೋನಾ ಬಂದ್ರು ಯಾವುದೇ ಸಮಸ್ಯೆ ಆಗಲ್ಲ. ಬೇಗ ಚೇತರಿಸಿಕೊಳ್ಳತ್ತಾರೆ ಅಂತ ವೈದ್ಯರು ತಿಳಿಸಿದ್ದಾರೆ. ಮಾಂಸ, ಮೀನು ಮೊಟ್ಟೆ, ಧಾನ್ಯಗಳಂತ ಪೌಷ್ಠಿಕಾಂಶದ ಆಹಾರ ಸೇವಿಸಿ.


ಶೀತ, ಕೆಮ್ಮಿಗೆ ಏನು ಮಾಡಬೇಕು?

ಶೀತ, ಕೆಮ್ಮು, ಜ್ವರ ಬಂದ್ರೆ ಒಬ್ಬರಿಂದ ಒಬ್ಬರಿಗೆ ಬೇಗ ಹರಡುವುದರಿಂದ ಅಂತರ ಕಾಯ್ದುಕೊಳ್ಳಬೇಕು. ಪ್ರತಿನಿತ್ಯ ಬಿಸಿ ನೀರು ಕುಡಿಯಿರಿ, ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಿ. ಉಸಿರಾಟದ ತೊಂದರೆ, 99 ಡಿಗ್ರಿ ಮೀರಿ ಜ್ವರವಿದ್ದರೆ ವೈದ್ಯರನ್ನು ಸಂಪರ್ಕಿಸಿ. 


ಸರಳ ಔಷಧ ಏನು..?

ಸಾಮಾನ್ಯ ಶೀತ, ಕೆಮ್ಮ, ನೆಗಡಿಗೆ ಮನೆಮದ್ದು ಬಳಸೋದೆ ಉತ್ತಮ. ತುಳಸಿ ಎಲೆ ಹಾಗೂ ಜೇನುತುಪ್ಪಾ ಸೇವಿಸಿ. ವೀಳ್ಯೆದೆಲೆ ರಸವನ್ನು ಹಿಡಿಸೇವಿಸುವುದು ಉತ್ತಮ. ಜ್ವರಕ್ಕೆ ಅಮೃತಬಳಿ ಕಷಾಯ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತೆ. ಕೆಮ್ಮು ಕಡಿಮೆ ಮಾಡಲು ನಿತ್ಯ ಹಾಲಿಗೆ ಅರಿಶಿನ ಹಾಕಿ ಕುಡಿಯಿರಿ. ಒಂದು ಪಾತ್ರೆಗೆ 4 ಇಂಚಿನಷ್ಟು ದೊಡ್ಡದಿರುವ ಶುಂಠಿ, ಚಕ್ಕೆ, ನಕ್ಷತ್ರ ಮೊಗ್ಗು ಹಾಕಿ ಚೆನ್ನಾಗಿ ಕುದಿಸಿ ತಣ್ಣಗಾದ ಬಳಿಕ ಕುಡಿಯಿರಿ. ಶೀತ ಕಡಿಮೆ ಮಾಡಲು ಸ್ವಲ್ಪ ಬಿಸಿ ನೀರಿಗೆ ನಿಂಬೆರಸ ಮತ್ತು ದಾಲ್ಚಿನ್ನಿ ಸೇರಿಸಿ ಕುಡಿಯಿರಿ.

أحدث أقدم