ರಾಷ್ಟ್ರೀಯ ಮಟ್ಟದಲ್ಲಿ ಸುನ್ನೀ ಚಳವಳಿಯನ್ನು ಬಲಪಡಿಸುವಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದು--- ಸುಲ್ತಾನುಲ್ ಉಲಮಾ ಎಪಿ ಉಸ್ತಾದ್

ರಾಷ್ಟ್ರೀಯ ಮಟ್ಟದಲ್ಲಿ ಸುನ್ನೀ ಚಳವಳಿಯನ್ನು ಬಲಪಡಿಸುವಲ್ಲಿ ಕರ್ನಾಟಕದ ಪಾತ್ರ ಮಹತ್ವದ್ದು
--- ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ 

ಕರ್ನಾಟಕದಲ್ಲಿ ಸುನ್ನಿ ಸಂಘಟನಾ ಚಟುವಟಿಕೆಗಳನ್ನು ಸಕ್ರಿಯಗೊಳಿಸುವ ಸಂಬಂಧ ರಾಜ್ಯದ ಸುನ್ನೀ ಸಂಘಟನೆಗಳ ಸಂಯುಕ್ತ ಸಭೆಯು ಕಲ್ಲಿಕೋಟೆ ಸಮಸ್ತ ಇಸ್ಲಾಮಿಕ್ ಸೆಂಟರ್ ನಲ್ಲಿ  ನಡೆಯಿತು.


ಸುನ್ನೀ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಕರ್ನಾಟಕ ಜಂಇಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಎಂ.ಅಬ್ದುಲ್‌ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಉದ್ಘಾಟಿಸಿದರು. ಸಮಸ್ತ ಕೇರಳ ಜಂಇಯತುಲ್ ಉಲಮಾ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ,ಕೇರಳ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ವಂಡೂರ್ ಅಬ್ದುಲ್‌ ರಹ್ಮಾನ್ ಫೈಝಿ,ಕೇರಳ ರಾಜ್ಯ ಎಸ್.ವೈ‌.ಎಸ್. ಪ್ರಧಾನ ಕಾರ್ಯದರ್ಶಿ ಡಾ‌. ಅಬ್ದುಲ್‌ ಹಕೀಂ ಅಝ್‌ಹರಿ, ಡಾ. ಮುಹಮ್ಮದ್ ಕುಂಞಿ ಸಖಾಫಿ ಕೊಲ್ಲಂ ವಿವಿಧ ವಿಷಯಗಳ ತರಬೇತಿ ನಡೆಸಿಕೊಟ್ಟರು.


ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಗಳ ಸಬಲೀಕರಣಕ್ಕೆ ಅನುಸರಿಸಬೇಕಾದ ಕಾರ್ಯಕ್ರಮಗಳು, ಸದಸ್ಯತ್ವ ಸಮಯದ ಏಕೀಕರಣ ಹಾಗೂ ಭಾರತ ರಾಷ್ಟ್ರೀಯ ಮಟ್ಟದಲ್ಲಿ ಸುನ್ನೀ ಸಂಘಟನಾ ಚಳುವಳಿಯ ವಿಸ್ತರಣೆಯ ಕುರಿತು ಚರ್ಚಿಸಿ  ಕಾರ್ಯ ಯೋಜನೆಗಳನ್ನು ಸಿಧ್ದಪಡಿಸಲಾಯಿತು.


ಕರ್ನಾಟಕ ಜಂಇಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಕೆಪಿ ಹುಸೈನ್ ಸಅದಿ, ಕೋಶಾಧಿಕಾರಿ ಅಬ್ದುಲ್ ರಝ್ಝಾಕ್ ಮದನಿ,ಸುನ್ನೀ ಯುವಜನ ಸಂಘ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಹಫೀಲ್ ಸ‌ಅದಿ ಕೊಳಕೇರಿ, ಕೋಶಾಧಿಕಾರಿ ಅಬ್ದುಲ್‌ ಹಕೀಂ ಕೊಡ್ಲಿಪೇಟೆ, ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸ‌ಅದಿ ಬೆಂಗಳೂರು, ಉಪಾಧ್ಯಕ್ಷ ಉಮರ್ ಹಾಜಿ ಅಭಿಮಾನ್ ಬೆಂಗಳೂರು, ಕಾರ್ಯದರ್ಶಿ ಅಬ್ದುಲ್‌ ಹಮೀದ್ ಬಜಪೆ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸ‌ಅದಿ ಶಿಮೋಗ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಕೋಶಾಧಿಕಾರಿ ಸುಫ್ಯಾನ್ ಸಖಾಫಿ ಎಚ್.ಐ.ಹಾಗೂ ಇತರ ಪ್ರತಿನಿಧಿಗಳು ಭಾಗವಹಿಸಿದರು.
Previous Post Next Post