ರಾಜ್ಯದಲ್ಲಿ ಭಾರೀ ಇಳಿಕೆ ಕಂಡ ಕೊವಿಡ್, ಇಂದು 1568 ಪಾಸಿಟಿವ್
ಬೆಂಗಳೂರು : ರಾಜ್ಯದಲ್ಲಿ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗ್ತಿದ್ದು , ಇಂದು 1568 ಮಂದಿಗೆ ಕೋವಿಡ್ ದೃಢಪಟ್ಟಿದ್ರೆ , 25 ಜನ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.
ಈ ಕುರಿತು ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ 754 ಮಂದಿಗೆ ಸೇರಿ ರಾಜ್ಯದಲ್ಲಿ ಒಟ್ಟು 1568 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇನ್ನು ರಾಜ್ಯದಲ್ಲಿ ಇಂದು ಪಾಸಿಟಿವಿಟಿ ದರ 2.2 % ಕ್ಕೆ ತಲುಪಿದೆ' ಎಂದಿದ್ದಾರೆ.
ಇಂದು ಈ ಕಿಲ್ಲರ್ ಕೊರೊನಾಗೆ ಬೆಂಗಳೂರಿನಲ್ಲಿ 5 ಜನ ಸೇರಿ ರಾಜ್ಯಾದ್ಯಾಂತ 25 ಮಂದಿ ಬಲಿಯಾಗಿದ್ದಾರೆ. ಇನ್ನು 6025 ಜನ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ 31215 ಕ್ಕೆ ತಲುಪಿದೆ.