ಪಂಚರಾಜ್ಯಗಳ ಚುನಾವಣೆ: ಇಂದು ಗೋವಾದಲ್ಲಿ ಶೇ.75, ಯುಪಿಯಲ್ಲಿ ಶೇ.60, ಉತ್ತರಾಖಂಡ್ ನಲ್ಲಿ ಶೇ.59 ಮತದಾನ

ಪಂಚರಾಜ್ಯಗಳ ಚುನಾವಣೆ: ಇಂದು ಗೋವಾದಲ್ಲಿ ಶೇ.75, ಯುಪಿಯಲ್ಲಿ ಶೇ.60,  ಉತ್ತರಾಖಂಡ್ ನಲ್ಲಿ ಶೇ.59 ಮತದಾನ

ಪಂಚರಾಜ್ಯ ಚುನಾವಣೆಯಲ್ಲಿ ಇಂದು ಮೂರು ರಾಜ್ಯಗಳಲ್ಲಿ ಚುನಾವಣೆ ನಡೆದಿದ್ದು, ಸಂಜೆ 5 ಗಂಟೆವರೆಗೆ ಗೋವಾದಲ್ಲಿ ಶೇ.75, ಯುಪಿಯಲ್ಲಿ (ಹಂತ 2) ಶೇ.60 ಹಾಗೂ ಉತ್ತರಾಖಂಡ್‌ನಲ್ಲಿ ಶೇ. 59ರಷ್ಟು ಮತದಾನ ನಡೆದಿದೆ.


ಗೋವಾದ ಎಲ್ಲಾ 40 ಸ್ಥಾನಗಳಿಗೆ , ಉತ್ತರಾಖಂಡದ 70 ಸ್ಥಾನಗಳಿಗೆ , ಉತ್ತರಪ್ರದೇಶದ ಒಂಬತ್ತು ಜಿಲ್ಲೆಗಳ 55 ಸ್ಥಾನಗಳಿಗೆ ಮತದಾನ ನಡೆಯಿತು.


ಉತ್ತರಪ್ರದೇಶದಲ್ಲಿ 2ನೇ ಹಂತದ ಮತದಾನದಲ್ಲಿ 55 ವಿಧಾನಸಭೆ ಸ್ಥಾನಗಳಿಗೆ 586 ಅಭ್ಯರ್ಥಿಗಳು ಕಣದಲ್ಲಿದ್ದರು.


ಗೋವಾದಲ್ಲಿ ಒಂದನೇ ಹಂತದ ಚುನಾವಣೆಯಲ್ಲಿ 40 ಸ್ಥಾನಗಳಿಗೆ 301 ಅಭ್ಯರ್ಥಿಗಳು ಮತ್ತು ಉತ್ತರಾಖಂಡದ 70 ಸ್ಥಾನಗಳಿಗೆ 632 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
Previous Post Next Post