ರಾಜ್ ಕೋಟ್ ನಲ್ಲಿ ಎಸ್ಸೆಸ್ಸೆಫ್ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ-22 ಕ್ಕೆ ಚಾಲನೆ

ರಾಜ್ ಕೋಟ್ ನಲ್ಲಿ ಎಸ್ಸೆಸ್ಸೆಫ್ ರಾಷ್ಟ್ರ ಮಟ್ಟದ ಸಾಹಿತ್ಯೋತ್ಸವ-22 

ರಾಜ್ ಕೋಟ್: ಎಸ್ಸೆಸ್ಸೆಫ್ ರಾಷ್ಟ್ರಮಟ್ಟದ ಪ್ರತಿಭೋತ್ಸವಕ್ಕೆ (ಸಾಹಿತ್ಯೋತ್ಸವಕ್ಕೆ) ಗುಜರಾತ್ ಸಾಕ್ಷಿಯಾಗುತ್ತಿದೆ. ರಾಷ್ಟ್ರದ ವಿವಿಧ ರಾಜ್ಯಗಳಿಂದ ಆಯ್ಕೆಯಾದ ಸ್ಪರ್ಧಾರ್ಥಿಗಳು ರಾಜ್ ಕೋಟ್ ನಲ್ಲಿ ತಮ್ಮ ಪ್ರತಿಭೆಗಳ ಅನಾವರಣ ಮಾಡುತ್ತಿದ್ದು ರಾಷ್ಟ್ರ ಕಿರೀಟಕ್ಕೆ ಮುತ್ತಿಡಲು ವಿವಿಧ ರಾಜ್ಯಗಳು ತೀವ್ರ ಪೈಪೋಟಿಯೊಂದಿಗೆ ಸಾಗುತ್ತಿದೆ. 


ಫೆ.22 ರಿಂದ ಆರಂಭವಾದ ಸ್ಪರ್ಧಾ ಕಾರ್ಯಕ್ರಮಗಳು ನಾಳೆಯ (ಫೆ.25) ಸಂಜೆಯನ್ನು ಸಾಕ್ಷಿಯಾಗಿಸಿ ಸಮಾರೋಪಗೊಳ್ಳಲಿದೆ. 


ಹತ್ತು ಫಲಿತಾಂಶಗಳು ಹೊರ ಬಂದಾಗ ದೇವರ ಸ್ವಂತ ನಾಡು ಖ್ಯಾತಿಯ ಸುಂದರ ಕೇರಳ ಮೊದಲ ಸ್ಥಾನದಲ್ಲಿದ್ದರೆ ರಾಷ್ಟ್ರದ ಸೌಂದರ್ಯ ಜಮ್ಮು&ಕಾಶ್ಮೀರ್ ದ್ವಿತೀಯ ಸ್ಥಾನದಲ್ಲಿದೆ. ಒಂದು ರಾಜ್ಯ ಹಲವು ಜಗತ್ತು ಖ್ಯಾತಿಯ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಇತರ ರಾಜ್ಯಗಳ ಅಂಕಪಟ್ಟಿ ಈ ರೀತಿ ಇದೆ

Previous Post Next Post