'ಭಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸಿದರೆ ಕಂಡರಿಯದ ಪರಿಣಾಮ': ವಿಶ್ವದ ಇತರ ರಾಷ್ಟ್ರಗಳಿಗೆ ಪುಟಿನ್ ಎಚ್ಚರಿಕೆ
ಉಕ್ರೇನ್ನಿಂದ ಬರುತ್ತಿರುವ ಬೆದರಿಕೆಗಳಿಗೆ ಉತ್ತರವಾಗಿ ಆ ರಾಷ್ಟ್ರದಲ್ಲಿ ಮಿಟಿಟರಿ ಕಾರ್ಯಾಚರಣೆ ನಡೆಸಲು ಉದ್ದೇಶಿಸಲಾಗಿದೆ ಎಂದು ಅವರು ತಮ್ಮ ಯುದ್ಧ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಉಕ್ರೇನ್ ಅನ್ನು ವಶಪಡಿಸಿಕೊಳ್ಳುವುದು ನಮ್ಮ ಗುರಿಯಲ್ಲ. ಇದು ನಾಗರಿಕರನ್ನು ರಕ್ಷಿಸುವ ಉದ್ದೇಶವಾಗಿದೆ. ರಕ್ತಪಾತದ ಹೊಣೆಗಾರಿಕೆ ಉಕ್ರೇನಿಯನ್ 'ಆಡಳಿತ'ದ ಮೇಲಿದೆ ಎಂದು ಪುಟಿನ್ ಆರೋಪಿಸಿದ್ದಾರೆ.
ಬೇರೆ ರಾಷ್ಟ್ರಗಳು ಮಧ್ಯಪ್ರವೇಶಿಸದಂತೆ ಎಚ್ಚರಿಕೆ: ಇನ್ನು ಉಕ್ರೇನ್ ಮೇಲೆ ಯುದ್ಧ ಘೋಷಿಸಿದ ಬಳಿಕ ವಿಶ್ವದ ಇತರೆ ರಾಷ್ಟ್ರಗಳು ಇದರಲ್ಲಿ ತಲೆದೂರಿಸದಂತೆ ಪುಟಿನ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಒಂದು ವೇಳೆ ಈ ಬಿಕ್ಕಟ್ಟಿನಲ್ಲಿ ಇತರೆ ದೇಶಗಳು ಮಧ್ಯಪ್ರವೇಶಿಸಿದ್ದೇ ಆದಲ್ಲಿ 'ಎಂದೂ ನೋಡಿರದ ಭೀಕರ ಪರಿಣಾಮಗಳಿಗೆ ಕಾರಣವಾಗುತ್ತೀರಾ' ಎಂದು ಪುಟಿನ್ ಎಚ್ಚರಿಸಿದ್ದಾರೆ.