ಹಿಜಾಬ್ ವಿವಾದ: ವಿಚಾರಣೆಗೆ ಹೈಕೋರ್ಟ್ 'ವಿಶೇಷ ಪೂರ್ಣ ಪೀಠ' ರಚನೆ, ಇಂದು ಮಧ್ಯಾಹ್ನ 2:30 ಕ್ಕೆ ಅರ್ಜಿ ವಿಚಾರಣೆ ಆರಂಭ
ಬೆಂಗಳೂರು, ಫೆ.9: ಹಿಜಾಬ್ ನಿರ್ಬಂಧ, ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮವಸ್ತ್ರ ಸಂಹಿತೆ ಜಾರಿಗೊಳಿಸಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಗೆಂದು ಹೈಕೋರ್ಟ್ ಬುಧವಾರ ತ್ರಿಸದಸ್ಯ ಪೀಠ ಸ್ಥಾಪಿಸಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಝಿ ಜೈಬುನ್ನೀಸಾ ಮುಹಿಯಿದ್ದೀನ್ ಅವರನ್ನೊಳಗೊಂಡ ಪೀಠ, ಹಿಜಾಬ್ ನಿರ್ಬಂಧ, ಸಮವಸತ್ರ ಸಂಹಿತೆ ಜಾರಿ ಕುರಿತು ನಿರ್ಣಯ ಕೈಗೊಳ್ಳಲಿದೆ.
ಗುರುವಾರ ಪೂರ್ಣಪೀಠದಲ್ಲಿ ಮಧ್ಯಾಹ್ನ 2.30ಕ್ಕೆ ಹಿಜಾಬ್ ಪ್ರಕರಣದ ಅರ್ಜಿ ವಿಚಾರಣೆ ನಡೆಯಲಿದೆ.
ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಹಿಜಾಬ್ ಪ್ರಕರಣ ಕುರಿತಂತೆ ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಸಲ್ಲಿಸಿದ್ದ ಅರ್ಜಿಗಳನ್ನು ಬುಧವಾರ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿತ್ತು. ಸಾಂವಿಧಾನಿಕ ಹಕ್ಕುಗಳು ಮತ್ತು ವೈಯಕ್ತಿಕ ಕಾನೂನಿಗೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳು ಒಳಗೊಂಡಿವೆ.