ರಾಜ್ಯದಲ್ಲಿ ಕೊವಿಡ್ ಗಣನೀಯ ಇಳಿಕೆ, ಇಂದು 2,372 ಪಾಸಿಟಿವ್

ರಾಜ್ಯದಲ್ಲಿ ಕೊವಿಡ್ ಗಣನೀಯ ಇಳಿಕೆ,  ಇಂದು 2,372 ಪಾಸಿಟಿವ್ 


ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು, ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನನಿತ್ಯದ ಹೊಸ ಪ್ರಕರಣಗಳ ಸಂಖ್ಯೆ ಇಂದು 1 ಸಾವಿರಕ್ಕೆ ಇಳಿಕೆಯಾಗಿದೆ.


ರಾಜ್ಯದಲ್ಲಿ ಇಂದು ಒಟ್ಟು 2,372 ಹೊಸ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ 1,059 ಹೊಸ ಪ್ರಕರಣಗಳು ವರದಿಯಾಗಿದೆ. ರಾಜ್ಯದಲ್ಲಿ ಪಾಸಿಟಿವಿಟಿ ದರ 2.31% ಕ್ಕೆ ಇಳಿದಿದ್ದು, ಬೆಂಗಳೂರಿನಲ್ಲಿ 2.09% ಆಗಿದೆ. ಇಂದು 5,395 ಸೋಂಕಿತರು ಡಿಸ್ಚಾರ್ಜ್‌ ಆಗಿದ್ದಾರೆ.


ರಾಜ್ಯದಲ್ಲಿ 35,697 ಸಕ್ರಿಯ ಪ್ರಕರಣಗಲಿದ್ದು, ಬೆಂಗಳೂರಿನಲ್ಲಿ 14 ಸಾವಿರ ಪ್ರಕರಣಗಳಿವೆ.ಇಂದು ರಾಜ್ಯದಲ್ಲಿ 27 ಮಂದಿ ಸಾವನ್ನಪ್ಪಿದ್ದು, ಆ ಪೈಕಿ 7 ಸೋಂಕಿತರ ಸಾವುಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 1,02,279 ಮಂದಿಗೆ ಪರೀಕ್ಷೆಗಳನ್ನು ನಡೆಸಲಾಗಿದೆ.

Previous Post Next Post