ಶಿರವಸ್ತ್ರ ವಿವಾದ: ಶಾಲಾ ಕಾಲೇಜು ಕೋಮುವಾದದ ಪ್ರಯೋಗ ಶಾಲೆಗಳಾಗುವುದು ಖಂಡನೀಯ: Dr. MSM.Zaini Kamil

ಶಿರವಸ್ತ್ರ ವಿವಾದ: ಶಾಲಾ ಕಾಲೇಜು ಕೋಮುವಾದದ ಪ್ರಯೋಗ ಶಾಲೆಗಳಾಗುವುದು ಖಂಡನೀಯ: Dr. MSM.Zaini Kamil


ಶಿರವಸ್ತ್ರ ವಿವಾದ ಸಮಾಜದಲ್ಲಿ ಆತಂಕವನ್ನು ಸೃಷ್ಟಿಸಿದ್ದು ಕೋಮು ಸಾಮರಸ್ಯವನ್ನು ಕೆಡಿಸುತ್ತಿದೆ. ಆದಷ್ಟು ಬೇಗ ಸಂಬಂಧಪಟ್ಟವರು ಈ ವಿವಾದಕ್ಕೆ ಅಂತ್ಯ ಹಾಡಬೇಕಿದೆ ಎಂದು ಎಸ್ ವೈಎಸ್ ಕರ್ನಾಟಕ ರಾಜ್ಯಾಧ್ಯಕ್ಷರು ಡಾಕ್ಟರ್ ಎಮ್ಮೆಸ್ಸೆಂ ಝೈನಿ ಕಾಮಿಲ್ ಆಗ್ರಹಿಸಿದ್ದಾರೆ. 


ಶಾಲಾ ಕಾಲೇಜುಗಳು ಭಾರತದ ಭವಿಷ್ಯದ ನಾಯಕರುಗಳನ್ನು ಸೃಷ್ಟಿ ಮಾಡುವ ಕಾರ್ಖಾನೆಗಳು. ಒಂದು ಪುಟ್ಟ ಭಾರತವನ್ನು ಶಾಲಾಕಾಲೇಜುಗಳಲ್ಲಿ ಕಾಣಲು ನಮಗೆ ಸಾಧ್ಯವಾಗುತ್ತದೆ. ಆ ಸುಂದರ ವಿದ್ಯಾದೇಗುಲಗಳನ್ನು ಕಲುಷಿತಗೊಳಿಸುವ ಕಾರ್ಯಕ್ಕೆ ಯಾರೂ ಕೂಡ ಕೈಹಾಕಬಾರದು. ಹಲವು ವರ್ಷಗಳಿಂದ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸಿ ಶಾಲಾ ಕಾಲೇಜುಗಳಿಗೆ ಹಾಜರಾಗುತ್ತಿದ್ದಾರೆ. 


ಶಾಲಾ ಕಾಲೇಜುಗಳು ಭಾರತದ ಭವಿಷ್ಯವನ್ನು ನಿರ್ಣಯಿಸುವ ಕಾರ್ಯಾಗಾರಗಳು. ಶಿರವಸ್ತ್ರದ ವಿಷಯದಲ್ಲಿ ಹೊರಗಿನವರ ಹಸ್ತಕ್ಷೇಪವೇ ಪರಿಸ್ಥಿತಿಯನ್ನು ಈ ಮಟ್ಟಕ್ಕೆ ತಲುಪಿಸಿದೆ. ರಾಜಕೀಯ ಪಕ್ಷದವರ ಹಸ್ತಕ್ಷೇಪ ವಿವಾದ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. ಶಿರವಸ್ತ್ರಕ್ಕೆ ಬದಲಾಗಿ ಕೇಸರಿ ಶಾಲು ಇನ್ನಷ್ಟು ಕೋಮುಭಾವನೆಯನ್ನು ಕೆರಳಿಸಲು ಕಾರಣವಾಗಿದೆ. ಆದುದರಿಂದ ಈ ಅನಗತ್ಯ ವಿವಾದವನ್ನು ಎಸ್ ವೈಎಸ್ ಕರ್ನಾಟಕ ರಾಜ್ಯ ತೀವ್ರವಾಗಿ ಖಂಡಿಸುತ್ತದೆ ಎಂದು ರಾಜ್ಯಾಧ್ಯಕ್ಷರು ಡಾ. ಝೈನಿ ಕಾಮಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಶಾಲಾ ಕಾಲೇಜು ಕೋಮುವಾದದ ಪ್ರಯೋಗ ಶಾಲೆಗಳಾಗುವುದು ಖಂಡನೀಯ. ಅದು ಸೌಹಾರ್ದತೆಯ ಬೀಡು. ವಿದ್ಯಾ ದೇಗುಲಗಳಲ್ಲಿ ಶಾಂತಿ ನೆಲೆಸಬೇಕು. ಹಳೆಯ ರೀತಿಯಲ್ಲೇ ವಿದ್ಯಾರ್ಥಿನಿಯರಿಗೆ ಹಿಜಾಬ್ ಗೆ ಅವಕಾಶ ಲಭಿಸಬೇಕು. ನ್ಯಾಯಾಂಗದ ಮೇಲೆ ಭರವಸೆಯಿದೆ. ವಿದ್ಯಾರ್ಥಿನಿಯರಿಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಘಟನೆಯಲ್ಲಿ ಝೈನಿ ಖಾಮಿಲ್ ತಿಳಿಸಿದ್ದಾರೆ.    

Dr. MSM.Zaini Kamil
(ಅಧ್ಯಕ್ಷರು SჄS ಕರ್ನಾಟಕ ರಾಜ್ಯ)Previous Post Next Post