ಭಾರತದಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಭಾರೀ ಇಳಿಕೆ, ಕಳೆದ 24 ಗಂಟೆಗಳಲ್ಲಿ 16,051 ಪಾಸಿಟಿವ್

ಭಾರತದಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಭಾರೀ ಇಳಿಕೆ,  ಕಳೆದ 24 ಗಂಟೆಗಳಲ್ಲಿ 16,051 ಪಾಸಿಟಿವ್ 


ನವದೆಹಲಿ: ಭಾರತದಲ್ಲಿ ಇಂದು ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಇಳಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲಿ 16,051 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.


ಕೇಂದ್ರ ಆರೋಗ್ಯಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 16.051 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 206 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. 


24ಗಂಟೆಯಲ್ಲಿ ಕೋವಿಡ್ 19 ಸೋಂಕಿನಿಂದ 37,901 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿನ ಚೇತರಿಕೆ ಪ್ರಮಾಣ ದರ ಶೇ.98.33ರಷ್ಟಿದೆ. ದೇಶದಲ್ಲೀಗ 172.32 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ.


ಸಕ್ರಿಯ ಪ್ರಕರಣ: 2,02,131

ದೈನಂದಿನ ಧನಾತ್ಮಕತೆ ದರ: 1.68%

ಒಟ್ಟು ಚೇತರಿಕೆಗಳು: 4,21,24,284

ಒಟ್ಟು ಲಸಿಕೆ: 1,75,46,25,710

Previous Post Next Post