ಹಿಜಾಬ್ ವಿವಾದ: ವಿಚಾರಣೆಯನ್ನು ನಾಳೆಗೆ ಮುಂದೂಡಿದ ನ್ಯಾಯಾಲಯ
ಹಿಜಾಬ್ ವಿವಾದ ಮುಗಿಯೋ ಹಾಗೇ ಕಾಣುತ್ತಿಲ್ಲ. ಈ ವಿಚಾರದಲ್ಲಿ ನ್ಯಾಯಾಲಯ ಈಗಾಗಲೇ ಮಧ್ಯಂತರ ಆದೇಶ ನೀಡಿದೆ.
ಇಂದು ಸಹ ನ್ಯಾಯಾಲಯದಲ್ಲಿ ಹಿಜಾಬ್ ವಿವಾದದ ಬಗ್ಗೆ ದೀರ್ಘಕಾಲದ ವಾದ ನಡೆಯಿತು. ಮಧ್ಯಾಹ್ನ 2:30ರಿಂದ ಶುರುವಾದ ವಿಚಾರಣೆ, ಸರಿಸುಮಾರು 4:45ರವರೆಗೆ ನಡೆಯಿತು.
ವಾದ ಆಲಿಸಿದ ನ್ಯಾಯಾಲಯ ಈ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ನಾಳೆ ಮಧ್ಯಾಹ್ನ 2:30 ಕ್ಕೆ ಮುಂದೂಡಿ, ಆದೇಶ ಹೊರಡಿಸಿದೆ.