ಕನ್ನಡ ಮಾಧ್ಯಮಗಳ ಅತಿರೇಕದ ವರ್ತನೆ ಖಂಡನೀಯ, ಶಿರವಸ್ತ್ರ ವಿಷಯದಲ್ಲಿ ಕೆಲವು ಮಾಧ್ಯಮಗಳು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ: ಎಸ್ಸೆಸ್ಸೆಫ್ ಖಂಡನೆ

ಕನ್ನಡ ಮಾಧ್ಯಮಗಳ ಅತಿರೇಕದ ವರ್ತನೆ ಖಂಡನೀಯ, ಶಿರವಸ್ತ್ರ ವಿಷಯದಲ್ಲಿ ಕೆಲವು ಮಾಧ್ಯಮಗಳು ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ: ಎಸ್ಸೆಸ್ಸೆಫ್ ಖಂಡನೆ 


ಮಂಗಳೂರು: ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಯನ್ನು ಆರೋಪಿಯಂತೆ ಅಟ್ಟಾಡಿಸಿ ವಿಡಿಯೋ ಮಾಡಿ ಅವಮಾನ ಮಾಡಿದ ಮಾಧ್ಯಮವೊಂದರ ವರದಿಗಾರನ ಅತಿರೇಕದ ವರ್ತನೆ ಖೇದಕರವಾಗಿದ್ದು, ಹಿಜಾಬ್ ವಿಷಯದಲ್ಲಿ ರಾಜ್ಯದ ಕೆಲವು ಮಾಧ್ಯಮಗಳು ಈ ರೀತಿ ವಿದ್ಯಾರ್ಥಿಗಳ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವುದು ಖಂಡನೀಯ ಎಂದು ರಾಜ್ಯ ಎಸ್ಸೆಸ್ಸೆಫ್ ಸೆಕ್ರೆಟರಿಯೇಟ್ ತಿಳಿಸಿತು. 


ವಸ್ತುನಿಷ್ಠ ವರದಿಗಳ ಮೂಲಕ ನಾಡಿನ ಶಾಂತಿ ಸೌಹಾರ್ದತೆಯನ್ನು ಕಾಪಾಡಬೇಕಿರುವುದು ಮಾಧ್ಯಮ ಧರ್ಮವಾಗಿದ್ದು, ಅದಕ್ಕೆ ವಿರುದ್ಧವಾಗಿ ಬೇಕಾಬಿಟ್ಟಿ ವರದಿ ಪ್ರಕಟಿಸುವ ಮಾಧ್ಯಮಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸ್ಸೆಸ್ಸೆಫ್ ಸೆಕ್ರೆಟರಿಯೇಟ್ ಆಗ್ರಹಿಸಿತು. 


ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮಂಗಳೂರು, ರಾಜ್ಯ ಕೋಶಾಧಿಕಾರಿ ಸುಫಿಯಾನ್ ಸಖಾಫಿ, ರಾಜ್ಯ ಕಾರ್ಯದರ್ಶಿಗಳಾದ ಸಫ್ವಾನ್ ಚಿಕ್ಕಮಗಳೂರು, ರವೂಫ್ ಖಾನ್ ಉಡುಪಿ, ರಹೀಮ್ ಎನ್ ಸಿ ಕಾರ್ಕಳ, ಮುನೀರ್ ಸಖಾಫಿ ಉಳ್ಳಾಲ, ಶರೀಫ್ ಕೊಡಗು ಉಪಸ್ಥಿತರಿದ್ದರು.
Previous Post Next Post