ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಈಗಾಗಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ( PU Board ) ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ( Second PUC Exam ) ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು.


ಈಗ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ದಿನಾಂಕ 16-04-2022 ರಿಂದ ದಿನಾಂಕ 06-05-2022ರವರೆಗೆ ಪರೀಕ್ಷೆ ನಡೆಯಲಿವೆ.


ಈ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ( Karnataka Second PU Exam Final Timetable ) ಪ್ರಕಟಿಸಲಾಗಿದೆ. 2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ದಿನಾಂಕ 16-04-2022ರಿಂದ 06-05-2022ರವರೆಗೆ ನಡೆಸಲು ತೀರ್ಮಾನಿಸಿ, ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದೆ.


ಹೀಗಿದೆ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ

  • ದಿನಾಂಕ 16-04-2022ರ ಶನಿವಾರ - ಗಣಿತ, ಶಿಕ್ಷಣ ಶಾಸ್ತ್ರ, ಮೂಲ ಗಣಿತ
  • ದಿನಾಂಕ 17-04-2022ರಂದು ಭಾನುವಾರ ರಜೆ
  • ದಿನಾಂಕ 18-04-2022ರ ಸೋಮವಾರ - ರಾಜ್ಯ ಶಾಸ್ತ್ರ, ಸಂಖ್ಯಾಶಾಸ್ತ್ರ
  • ದಿನಾಂಕ 19-04-2022ರ ಮಂಗಳವಾರ - ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ ನೆಸ್
  • ದಿನಾಂಕ 20-04-2022ರ ಬುಧವಾರ - ಇತಿಹಾಸ, ಭೌತಶಾಸ್ತ್ರ
  • ದಿನಾಂಕ 21-04-2022ರ ಗುರುವಾರ - ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಅರೇಬಿಕ್, ಫ್ರೆಂಚ್
  • ದಿನಾಂಕ 22-04-2022ರ ಶುಕ್ರವಾರ - ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ
  • ದಿನಾಂಕ 23-04-2022ರ ಶನಿವಾರ - ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನ: ಶಾಸ್ತ್ರ, ರಾಸಾಯನ ಶಾಸ್ತ್ರ
  • ದಿನಾಂಕ 24-04-2022ರಂದು ಭಾನುವಾರ ರಜೆ
  • ದಿನಾಂಕ 25-04-2022ರ ಸೋಮವಾರ - ಅರ್ಥ ಶಾಸ್ತ್ರ
  • ದಿನಾಂಕ 26-04-2022ರ ಮಂಗಳವಾರ - ಹಿಂದಿ
  • ದಿನಾಂಕ 27-04-202ರಂದು ಬುಧವಾರ ಪರೀಕ್ಷೆ ಇಲ್ಲ
  • ದಿನಾಂಕ 28-04-2022ರ ಗುರುವಾರ - ಕನ್ನಡ
  • ದಿನಾಂಕ 30-04-2022ರ ಶನಿವಾರ - ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ
  • ದಿನಾಂಕ 02-05-2022ರ ಸೋಮವಾರ - ಭೂಗೋಳ ಶಾಸ್ತ್ರ, ಜೇವಶಾಸ್ತ್ರ
  • ದಿನಾಂಕ 04-05-2022ರ ಬುಧವಾರ - ಇಂಗ್ಲೀಷ್
  • ದಿನಾಂಕ 06-05-2022ರ ಶುಕ್ರವಾರ - ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
Previous Post Next Post