U19 World Cup Final: ಇಂಗ್ಲೆಂಡ್ ಮಣಿಸಿ ವಿಶ್ವ ಕಿರೀಟಕ್ಕೆ ಮುತ್ತಿಟ್ಟ ಭಾರತದ

U19 World Cup Final: ಇಂಗ್ಲೆಂಡ್ ಮಣಿಸಿ ವಿಶ್ವ ಕಿರೀಟಕ್ಕೆ ಮುತ್ತಿಟ್ಟ ಭಾರತ


ಆಯಂಟಿಗುವಾ: 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್‌ ಅನ್ನು ಸೋಲಿಸುವ ಮೂಲಕ ಟ್ರೋಫಿ ಎತ್ತಿಹಿಡಿಯಿತು. ಶನಿವಾರ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಮಾಡಿತು.


ರಾಜ್ (31ಕ್ಕೆ5)ಮತ್ತು ರವಿ (34ಕ್ಕೆ4) ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ 44.5 ಓವರ್‌ಗಳಲ್ಲಿ 189 ರನ್‌ಗಳಿಗೆ ಆಲೌಟ್ ಆಯಿತು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟರ್ ಜೇಮ್ಸ್ ರಿವ್ (95; 116ಎ, 4X12) ಮತ್ತು ಕೆಳಕ್ರಮಾಂಕದ ಆಟಗಾರ ಜೇಮ್ಸ್ ಸೇಲ್ಸ್‌ (ಔಟಾಗದೆ 34) ಅವರು ಇಂಗ್ಲೆಂಡ್‌ಗೆ ಆಸರೆಯಾದರು.


ಗುರಿ ಬೆನ್ನತ್ತಿದ ಭಾರತ ತಂಡ 47.4 ಓವರ್‌ಗಳಲ್ಲಿ 6ಕ್ಕೆ 195 ರನ್ ಗಳಿಸಿತು. ಆ ಮೂಲಕ ಭಾರತ ತಂಡ 5ನೇ ಸಲ ವಿಶ್ವಕಪ್ ಕಿರೀಟ ಮುಡುಗೇರಿಸಿದ ಸಾಧನೆ ಮಾಡಿತು.

ಸಂಕ್ಷಿಪ್ತ ಸ್ಕೋರ್

ಇಂಗ್ಲೆಂಡ್: 44.5 ಓವರ್‌ಗಳಲ್ಲಿ 189
ಭಾರತ: 47.4 ಓವರ್‌ಗಳಲ್ಲಿ 195/6

Previous Post Next Post