ಎಸ್ಸೆಸ್ಸೆಫ್ ಚಿತ್ರದುರ್ಗ ಡಿವಿಷನ್ ಕಾನ್ಫರೆನ್ಸ್

ಎಸ್ಸೆಸ್ಸೆಫ್ ಚಿತ್ರದುರ್ಗ ಡಿವಿಷನ್ ಕಾನ್ಫರೆನ್ಸ್


ಚಿತ್ರದುರ್ಗ (ಮಾ.11): ಎಸ್ಸೆಸ್ಸೆಫ್ ಚಿತ್ರದುರ್ಗ ಡಿವಿಷನ್ ಕಾನ್ಫರೆನ್ಸ್ ಇಂದು ಚಿತ್ರದುರ್ಗ ನಗರದ ಬಾಹರ್ ಪೇಟೆ ಅಂಜುಮಾನ್ ಸರ್ಕಲ್ ನಲ್ಲಿ ನಡೆಯಿತು. 


ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮುಹಮ್ಮದ್ ಫೈಝುಲ್ಲಾ ಪಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯರು ಎಮ್ಮೆಸ್ಸೆಂ ಜುನೈದ್ ಸಖಾಫಿ ಹಿಮಮಿ ಮುನ್ನುಡಿ ಭಾಷಣ ಮಾಡಿದರು. 


ರಾಜ್ಯ ಸಮಿತಿ ಸದಸ್ಯರು ಅನ್ವರ್ ಅಸದಿ ಹಾಸನ 'ಸಂವಿಧಾನ ಧರ್ಮ ರಾಜಕೀಯ' ವಿಷಯದಲ್ಲಿ ವಿಚಾರ ಮಂಡಿಸಿದರು. 


ಆದಮ್ ರಝಾ ಸಖಾಫಿ, ಎಸ್ಸೆಸ್ಸೆಫ್ ಮಾಜಿ ರಾಜ್ಯ ಉಪಾಧ್ಯಕ್ಷರು ಅಡ್ವೊಕೇಟ್ ಸಾದಿಕುಲ್ಲಾ, ಕರ್ನಾಟಕ ಮುಸ್ಲಿಮ್ ಜಮಾತ್ ರಾಜ್ಯ ಕಾರ್ಯದರ್ಶಿ ಅಡ್ವೊಕೇಟ್ ಅಬ್ದುಲ್ ಜಲೀಲ್ ಝುಲ್ಫೀಕರ್, ಡಿವಿಷನ್ ಕಾರ್ಯದರ್ಶಿ ಅಶ್ಫಾಕ್ ಉಲ್ಲಾ ಷರೀಫ್  ಶುಭ ಹಾರೈಸಿದರು. 


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದ್ದಾಂ ಹುಸೇನ್ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು ಮತ್ತು ಕೊನೆಯಲ್ಲಿ ವಂದನೆ ಅರ್ಪಿಸಿದರು.
Previous Post Next Post