N-CONNECT: ಎಸ್ಸೆಸ್ಸೆಫ್ ನೋರ್ತ್ ಕರ್ನಾಟಕ ದಾಈಸ್ ಮತ್ತು ಲೀಡರ್ಸ್ ಮೀಟ್
ಗದಗ (ಮಾ.26): ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡ ನೋರ್ತ್ ಕರ್ನಾಟಕ ದಾಈಸ್ ಮತ್ತು ಲೀಡರ್ಸ್ ಮೀಟ್ N-CONNECT ಗದಗ ನಗರದ ಕರ್ನಾಟಕ ಭವನದಲ್ಲಿ ನಡೆಯಿತು.
ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಯ್ಯದ್ ಝೈನುಲ್ ಆಬಿದೀನ್ ತಙಳ್ ಬೆಳಗಾಮ್ ದುಆ ನೆರವೇರಿಸಿದರು.
ಎಸ್ ವೈ ಎಸ್ ನಾಯಕರಾದ ಜಿಎಂ ಮುಹಮ್ಮದ್ ಕಾಮಿಲ್ ಸಖಾಫಿ ಚರ್ಚೆಗೆ ನಾಯಕತ್ವ ನೀಡಿದರು ಮತ್ತು ತರಗತಿ ಮಂಡಿಸಿದರು. ಎಸ್ಸೆಸ್ಸೆಫ್ ರಾಜ್ಯ ಫಿನಾನ್ಸ್ ಸೆಕ್ರೆಟರಿ ಹಾಫಿಝ್ ಸುಫ್ಯಾನ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಉವೈಸ್ ಮನ್ಝರಿ ಹುಬ್ಬಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಎ ಇಬ್ರಾಹಿಮ್ ಸಖಾಫಿ ದಾವಣಗೆರೆ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಸ್ತಫಾ ನಈಮಿ ಹಿಮಮಿ ಮುನ್ನುಡಿ ಭಾಷಣ ಮಾಡಿದರು.
ಉತ್ತರ ಕರ್ನಾಟಕದಲ್ಲಿ ಸಂಘಟನೆಯನ್ನು ಬೆಳೆಸುವ ಬಗ್ಗೆ ಮತ್ತು ಸಕ್ರಿಯಗೊಳಿಸುವ ಬಗ್ಗೆ ವಿವಿಧ ಚರ್ಚೆಗಳು ನಡೆಸಲಾಯಿತು. ಉತ್ತರದ ವಿವಿಧ ಜಿಲ್ಲೆಗಳಲ್ಲಿ ದಾಇಗಳಾಗಿ ಕಾರ್ಯಚರಿಸುವ ಎಂಬತ್ತರಷ್ಟು ದಾಇಗಳು ಭಾಗವಹಿಸಿದರು.
ರಾಜ್ಯ ಕಾರ್ಯದರ್ಶಿಗಳಾದ ರವೂಫ್ ಖಾನ್ ಉಡುಪಿ, ಸಫ್ವಾನ್ ಚಿಕ್ಕಮಗಳೂರು, ಹಕೀಮ್ ಬೆಂಗಳೂರು, ರಾಜ್ಯ ಸಮಿತಿ ಸದಸ್ಯರಾದ ಸಯ್ಯದ್ ಅತ್'ಹರ್ ಸಖಾಫಿ ಹಾವೇರಿ, ಯಾಸೀನ್ ಸಖಾಫಿ ಹಾವೇರಿ, ಕೆಕೆ ಅಶ್ರಫ್ ಹಿಮಮಿ ಸಖಾಫಿ ಹರಿಹರ, ಎಮ್ಮೆಸ್ಸೆಂ ಜುನೈದ್ ಹಿಮಮಿ ಸಖಾಫಿ ಚಿತ್ರದುರ್ಗ, ಅನ್ವರ್ ಅಸದಿ ಹಾಸನ, ಮುಜೀಬ್ ಕೊಡಗು, ಜಲೀಲ್ ಅಮೀನಿ ಕೊಡಗು, ಗದಗ ಜಿಲ್ಲಾ ಅಧ್ಯಕ್ಷರಾದ ಕಲಂದರ್ ಖಾಝಿ, ಪ್ರಧಾನ ಕಾರ್ಯದರ್ಶಿ ಮನ್ಸೂರ್ ಖಾದಿರಿ ಭಾಗವಹಿಸಿದ್ದರು.
ರಾಜ್ಯ ಯುಡಿ ಕಾರ್ಯದರ್ಶಿ ರವೂಫ್ ಖಾನ್ ಉಡುಪಿ ಕಾರ್ಯಕ್ರಮದ ಆರಂಭದಲ್ಲಿ ಸ್ವಾಗತಿಸಿದರು ಮತ್ತು ಹಕೀಮ್ ಬೆಂಗಳೂರು ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.