ಎಸ್. ವೈ.ಎಸ್. 30ನೇ ವರ್ಷಕ್ಕೆ: ನವಂಬರ್‌ನಲ್ಲಿ ಘೋಷಣಾ ಸಮಾವೇಶ

ಎಸ್. ವೈ.ಎಸ್. 30ನೇ ವರ್ಷಕ್ಕೆ: ನವಂಬರ್‌ನಲ್ಲಿ ಘೋಷಣಾ ಸಮಾವೇಶ


ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) 2023 ರಲ್ಲಿ ಮೂವತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಇದರ ಅಂಗವಾಗಿ, ಸಾಮಾಜಿಕ ಪ್ರತಿಬಧ್ದತೆ, ರಾಷ್ಟ್ರೀಯ ಅಖಂಡತೆ ಮತ್ತು ನೈತಿಕ ಆಂದೋಲನವನ್ನು ಮುಖ್ಯ ವಸ್ತುವಾಗಿರಿಸಿ ಒಂದು ವರ್ಷದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ
"SჄS-30" ಎಂಬ ಹೆಸರಲ್ಲಿ ಮೂವತ್ತನೇ ವರ್ಷಾಚರಣೆ ನಡೆಸಲು ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ಅವರ ಅಧ್ಯಕ್ಷ ತೆಯಲ್ಲಿ ಮಂಜನಾಡಿ ಅಲ್ ಮದೀನಾ ಸಭಾಂಗಣದಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಭೆಯಲ್ಲಿ‌ ನಿರ್ಧಸರಿಸಲಾಯಿತು.


 1994 ಜನವರಿ 24 ಸೋಮವಾರ ಮಂಗಳೂರಿನಲ್ಲಿ ಸಂಘಟನೆ ಜನ್ಮ ತಾಳಿದ್ದು, ಪ್ರತಿವರ್ಷ ಜನವರಿ 24 ನ್ನು  "ಎಸ್.ವೈ.ಎಸ್.ಡೇ" ಆಗಿ ಆಚರಿಸಲಾಗುವುದೆಂದು ಹಿರಿಯ ನಾಯಕ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ ಸಭೆಯಲ್ಲಿ  ಘೋಷಿಸಿದರು.


ಮೂವತ್ತನೇ ವರ್ಷಾಚರಣೆಯ ಘೋಷಣಾ ಸಮಾವೇಶವು 2022 ನವೆಂಬರ್ 25,26 ದಿನಾಂಕಗಳಲ್ಲಿ ಶಿಮೊಗ್ಗದಲ್ಲಿ ನಡೆಯಲಿದ್ದು  ರಾಜ್ಯದ ಎಲ್ಲಾ ಬ್ರಾಂಚ್‌ಗಳಿಂದ ಆಯ್ದ ಮೂರು ಸಾವಿರ ಪ್ರತಿನಿಧಿಗಳು ಭಾಗವಹಿಸಲಿರುವರು.


ಉದ್ಘಾಟನಾ ಸಮಾವೇಶವು 2023 ಜನವರಿ 24 ಮಂಗಳವಾರ ಬೆಂಗಳೂರಿನಲ್ಲಿ ಹಾಗೂ ಸಮಾರೋಪ ಸಂಗಮವು 2024 ಜನವರಿ 24 ಬುಧವಾರ ಮಂಗಳೂರಿನಲ್ಲಿ ನಡೆಯಲಿರುವುದು. ಈ ನಡುವೆ ಜಾರಿಗೊಳಿಸಲಿರುವ 30 ಅಂಶ ಕಾರ್ಯಕ್ರಮಗಳ ಯೋಜನೆ ಸಿಧ್ದಪಡಿಸಲು ಪ್ಲಾನಿಂಗ್ ಸಮಿತಿಗೆ ರೂಪುಕೊಡಲಾಯಿತು. ಹಿರಿಯ ನಾಯಕ
ಪಟ್ಟೋರಿ ಉಸ್ಮಾನ್ ಸ‌ಅದಿ ಸಭೆಯನ್ನು ಉದ್ಘಾಟಿಸಿದರು. ಜಿಎಂ.ಕಾಮಿಲ್ ಸಖಾಫಿ ಪ್ರಾಸ್ತಾವಿಕ ಮಾತನ್ನಾಡಿದರು.
ಕಾರ್ಯದರ್ಶಿಗಳಾದ ಕೆಕೆಎಂ ಕಾಮಿಲ್ ಸಖಾಫಿ,ಅಬ್ದುಲ್ ಹಮೀದ್ ಬಜಪೆ, ಬಿಜಿ. ಹನೀಫ್ ಹಾಜಿ ಉಳ್ಳಾಲ,ಖಾಸಿಂ ಪದ್ಮುಂಜ,ಹಂಝ ನೆಲ್ಲಿಹುದಿಕೇರಿ,ಇಸಾಬಾ ರಾಜ್ಯ ಡೈರೆಕ್ಟರ್ ಇಖ್‌ಬಾಲ್ ಬಪ್ಪಳಿಗೆ, ರಾಜ್ಯ ಸಂಚಾಲಕ ಸಿದ್ದೀಖ್ ಕೆ.ಎಂ.ಮೋಂಟುಗೋಳಿ ಮುಂತಾದವರು  ವಿಷಯ ಮಂಡಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸ‌ಅದಿ ಸ್ವಾಗತಿಸಿ ಸಾಂತ್ವನ ಕಾರ್ಯದರ್ಶಿ ಬಶೀರ್ ಸ‌ಅದಿ ಬೆಂಗಳೂರು ಧನ್ಯವಾದ ಸಲ್ಲಿಸಿದರು.
Previous Post Next Post