SSLC: ಈ ಬಾರಿ ದಾಖಲೆಯ ಫಲಿತಾಂಶ, 145 ವಿದ್ಯಾರ್ಥಿಗಳಿಗೆ 625 ಅಂಕ

SSLC: ಈ ಬಾರಿ ದಾಖಲೆಯ ಫಲಿತಾಂಶ, 145 ವಿದ್ಯಾರ್ಥಿಗಳಿಗೆ 625 ಅಂಕ, 

ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ 10 ವರ್ಷಗಳಲ್ಲಿಯೇ ಈ ವರ್ಷ ಅತಿ ಹೆಚ್ಚು ಫಲಿತಾಂಶ ಬಂದಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಬಾರಿ ಶೇ.81.30ರಷ್ಟು ವಿದ್ಯಾರ್ಥಿಗಳು, 90.29ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ ಎಂದರು.


ಈ ಬಾರಿ 145 ವಿದ್ಯಾರ್ಥಿಗಳು 625ಕ್ಕೆ ಪೂರ್ಣ ಅಂಕ ಪಡೆದು ದಾಖಲೆ ಬರೆದಿದ್ದಾರೆ. ಇದರಲ್ಲಿ 21 ಮಕ್ಕಳು ಸರಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದರೆ, 8 ಅನುದಾನಿತ ಶಾಲೆಗಳು ಹಾಗೂ 118 ಶಾಲೆಗಳು ಅನುದಾನ ರಹಿತ ಶಾಲೆಗಳಾಗಿವೆ ಎಂದು ಸಚಿವರು ವಿವರಿಸಿದರು. ಜಿಲ್ಲಾವರು ಫಲಿತಾಂಶದಲ್ಲಿ ಗ್ರೇಡ್ ವ್ಯವಸ್ಥೆಯನ್ನು ತರಲಾಗಿದ್ದು, ಎ ಗ್ರೇಡ್ ನಲ್ಲಿ 32 ಜಿಲ್ಲೆಗಳಿದ್ದರೆ, 2 ಜಿಲ್ಲೆಗಳು ಬಿ ಗ್ರೇಡ್ ಪಡೆದಿವೆ. 20 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿದೆ.
Previous Post Next Post