ದೇಶಾದ್ಯಂತ ನಾಳೆ ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್

ದೇಶಾದ್ಯಂತ ನಾಳೆ ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್ 

ಒಂದೇ ದಿನ ಏಕ ಕಾಲಕ್ಕೆ ದೇಶದ 20 ರಾಜ್ಯಗಳಲ್ಲಿ ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್ 

ಆ ಮೂಲಕ ದೇಶಾದ್ಯಂತ ಕಲುಷಿತಗೊಂಡ ವಾತಾವರಣವನ್ನು ತಿಳಿಗೊಳಿಸೋಣ, ಒಡೆದ ಮನಸ್ಸುಗಳನ್ನು ಪೋಣಿಸೋಣ ಬನ್ನಿ

ಗೋಡೆ ಕಟ್ಟುವವರು ಗೋಡೆ ಕಟ್ಟಲಿ, ನಾವು ಮನುಷ್ಯ ಮನಸ್ಸು ಗಳೆಡೆಯಲ್ಲಿ ಸೇತುವೆ ನಿರ್ಮಿಸೋಣ 

ಅವರು ಕಟ್ಟಿದ ಗೋಡೆಗಳೆಡೆಯಲ್ಲಿ ಬಾಗಿಲ ತೆರೆಯೋಣ. ಹಳೆಯ ದಿನಗಳನ್ನು ಮರಳಿ ಪಡೆಯೋಣ ಬನ್ನಿ

1973 ಎಪ್ರಿಲ್ 29ಕ್ಕೆ ಉದಯಗೊಂಡ SSF 49 ಸಂವತ್ಸರಗಳು ದಾಟಿ ಐವತ್ತನೇ ವರ್ಷಕ್ಕೆ ಪದಾರ್ಪಣೆ ಗೈದಿದೆ. 2022 ಎಪ್ರಿಲ್ 29 ರಿಂದ 2023 ಎಪ್ರಿಲ್ 29 ರ ವರೆಗೆ SSF ಎಂಬ ಈ ವಿದ್ಯಾರ್ಥಿ ಶಕ್ತಿಗೆ ಸುವರ್ಣ ಮಹೋತ್ಸವದ ಕಾಲ. ಮುಂದಿನ ಒಂದು ವರ್ಷದಲ್ಲಿ SSF ಗೆ ರಾಷ್ಟ್ರಾದ್ಯಂತ ಹಲವು ಯೋಜನೆಗಳಿವೆ. ಆ ಮೂಲಕ ಎಸ್ಸೆಸ್ಸೆಫ್ ದೇಶಾದ್ಯಂತ ತನ್ನ ವಿಸ್ತೀರ್ಣವನ್ನು ಮತ್ತಷ್ಟು ಹೆಚ್ಚಿಸಲಿದೆ. ಪ್ರಸ್ತುತ ಸನ್ನಿವೇಶದಲ್ಲಿ ಅದು ಕಾಲದ ಬೇಡಿಕೆ ಕೂಡ 

ರಾಷ್ಟ್ರಾದ್ಯಂತ ನಾಳೆ ಎನ್ ಹಾನ್ಸ್ ಇಂಡಿಯಾ ಕಾನ್ಫರೆನ್ಸ್ ನಡೆಯಲಿದೆ. ರಾಜಧಾನಿ ದಿಲ್ಲಿಯಲ್ಲಿ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮ ಭಾಗವಹಿಸಲಿದ್ದಾರೆ ಮತ್ತು ವಿದ್ಯಾರ್ಥಿ ಶಕ್ತಿಯ ಸುವರ್ಣಮಹೋತ್ಸವದ ಘೋಷಣೆ ಮಾಡಲಿದ್ದಾರೆ. ಕರ್ನಾಟಕದ ಕಾನ್ಫರೆನ್ಸ್ ಮಂಗಳೂರಿನ ಅಡ್ಯಾರ್ ಕಣ್ಣೂರಿನಲ್ಲಿ ನಡೆಯಲಿದೆ. ನೀವು ಬನ್ನಿ, ನಿಮ್ಮೊಂದಿಗೆ ಇತರರನ್ನು ಕರೆತನ್ನಿ. ಐತಿಹಾಸಿಕ ಸಂಗಮದಲ್ಲಿ ನಾವು ಬಿಂದುಗಳಾಗೋಣ
________________________________

ಎಮ್ಮೆಸ್ಸೆಂ ಜುನೈದ್ ಸಖಾಫಿ ಹಿಮಮಿ ಚಿತ್ರದುರ್ಗ
(ಸದಸ್ಯರು SSF ರಾಜ್ಯ ಸಮಿತಿ)


#Enhance India Conference May 08
Adyar Kannur Mangalore ॥karnataka

Previous Post Next Post