ಜೂನ್ 11ರಂದು ತಲಪಾಡಿ 'ಮಿನ್‌ಹಾಜ್' ಕಾಲೇಜಿನಲ್ಲಿ 'ಅಲ್ ಮಾಹಿರಾ' ಸನದ್ ದಾನ

ಜೂನ್ 11ರಂದು
ತಲಪಾಡಿ 'ಮಿನ್‌ಹಾಜ್' ಕಾಲೇಜಿನಲ್ಲಿ 'ಅಲ್ ಮಾಹಿರಾ' ಸನದ್ ದಾನ 


ತಲಪಾಡಿ ಕೆ.ಸಿ.ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಮಿನ್‌ಹಾಜ್ ಮಹಿಳಾ  ಕಾಲೇಜಿನಲ್ಲಿ ಶರೀಅತ್ ಪದವಿ ಕೋರ್ಸ್ ಪೂರ್ತಿಗೊಳಿಸಿದ ವಿದ್ಯಾರ್ಥಿನಿಯರ ಪದವಿ ಪ್ರದಾನ ಕಾರ್ಯಕ್ರಮವು ಜೂನ್ ಹನ್ನೊಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಕೆಸಿ ರೋಡ್ ಮುನವ್ವಿರುಲ್ ಇಸ್ಲಾಂ ಮದ್ರಸದ 'ಮರ್ಹೂಂ ಕೆ.ಎಸ್. ಬಾವ ಹಾಜಿ ವೇದಿಕೆ'ಯಲ್ಲಿ ನಡೆಯಲಿದೆ.


ಈ ಸಮಾರಂಭದಲ್ಲಿ ಕಳೆದ ಐದು ವರ್ಷಗಳಲ್ಲಿ, ಮೂರು ಬ್ಯಾಚ್‌ಗಳಲ್ಲಿ ಅಧ್ಯಯನ ಪೂರ್ತಿಗೊಳಿಸಿದ  ಮೂವತ್ತೆಂಟು ವಿದ್ಯಾರ್ಥಿನಿಯರಿಗೆ 'ಅಲ್ ಮಾಹಿರಾ' ಪದವಿ ಪ್ರದಾನ ಮಾಡಲಾಗುವುದು. 


ಉಜಿರೆ ಸಯ್ಯಿದತ್ ಖದೀಜತುಲ್ ಕುಬ್ರಾ ಬೀವಿ ಬಾಅಲವಿ ಸನದ್ ಪ್ರದಾನ ಮಾಡುವರು. 
ಪರಿಸರದ ಹೈಸ್ಕೂಲ್ ಗಳಲ್ಲಿ ಈ ಕಳೆದ ಎಸ್ಸೆಸ್ಸೆಲ್ಸಿ ಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿನಿಯರನ್ನು  ಸನ್ಮಾನಿಸಲಾಗುವುದು. ಯೇನೆಪೋಯಾ ಡೆಂಟಲ್ ಕಾಲೇಜಿನ ಡಾ. ಉಮ್ಮು ಕುಲ್ಸೂಮ್ ಶಿವಮೊಗ್ಗ ಸನ್ಮಾನ ಕಾರ್ಯಕ್ರಮ ನಿರ್ವಹಿಸುವರು.

ರಂಸೀನಾ ಅಲ್ ಸ್ವಾಫಿಯಾ ಆಲಂಪಾಡಿ, ರಾಹಿಲಾ ಶೇಖ್ ಅಲ್ ಖಮರಿಯಾ, ಕೆ.ಎಂ.ಸುಮಯ್ಯಾ ಮೋಂಟುಗೋಳಿ,ಮಿನ್ಹಾಜ್ ಅಲುಂನಿ ಅಸೋಸಿಯೇಷನ್ ಅಧ್ಯಕ್ಷೆ ಸ‌ಈದಾ ಫಾತಿಮಾ ಅಲ್ ಮಾಹಿರಾ, ಭಾಷಣ ಮಾಡುವರು.

ಬೆಳಗ್ಗೆ ನಡೆಯುವ ಮುನ್ನುಡಿ ಸಮಾವೇಶಕ್ಕೆ ಸಂಸ್ಥೆಯ ಅಧ್ಯಕ್ಷ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಹಾಗೂ ಪ್ರಿನ್ಸಿಪಾಲ್ ಬಶೀರ್ ಅಹ್ಸನಿ ತೋಡಾರ್ ನೇತೃತ್ವ ನೀಡುವರು.


ಕಾರ್ಯಕ್ರಮ ಆಹ್ವಾನಿತ ಮಹಿಳೆಯರಿಗೆ ಮಾತ್ರ ಇರುವುದೆಂದು ಸಂಸ್ಥೆಯ ಪ್ರಧಾ ಕಾರ್ಯದರ್ಶಿ ಪಿ.ಎಂ.ಅಬ್ಬಾಸ್ ಪೂಮಣ್ಣು ತಿಳಿಸಿದ್ದಾರೆ
Previous Post Next Post