ಪ್ರವಾದಿ ನಿಂದನೆ ಹೇಳಿಕೆ ಬಿಜೆಪಿಯ ಅಸಹಿಷ್ಣುತೆಯ ಪರಮಾವಧಿ- ಎಸ್.ವೈ.ಎಸ್

ಪ್ರವಾದಿ ನಿಂದನೆ ಹೇಳಿಕೆ ಬಿಜೆಪಿಯ ಅಸಹಿಷ್ಣುತೆಯ ಪರಮಾವಧಿ- ಎಸ್.ವೈ.ಎಸ್

ಪ್ರವಾದಿ ಮುಹಮ್ಮದ್ (ಸ) ಅವರ ಕುರಿತು ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಬಿಜೆಪಿ ವಕ್ತಾರರ ಕ್ರಮವು ಖಂಡನೀಯ. ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದಾಗಿ ಬಿಜೆಪಿ ಹೇಳಿಕೊಂಡಿದೆ, ಇದರಿಂದ ಯಾವುದೇ ಪ್ರಯೋಜನ ಇಲ್ಲ. ಅವರನ್ನು ಶೀಘ್ರವಾಗಿ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದೆ ಬರಬೇಕೆಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಆಗ್ರಹಿಸಿದೆ.


ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇಂತಹ ಮತಾಂಧ ವ್ಯಕ್ತಿಗಳಿಂದ ಇಡೀ ವಿಶ್ವದಲ್ಲೇ ಭಾರತದ ಕೀರ್ತಿಗೆ ಹಾನಿಯಾಗಿದೆ. ಅರಬ್ ಮುಸ್ಲಿಂ ರಾಷ್ಟ್ರಗಳು ಇದನ್ನು ತೀವ್ರವಾಗಿ ಖಂಡಿಸಿದೆ. ಇಂತಹ ವಿಕೃತ ಮನಸಿನವರಿಗೆ ಸೂಕ್ತ ಶಾಸ್ತಿ‌ ಮಾಡಿ‌ ಜೈಲಿಗೆ ಅಟ್ಟುವ ಮೂಲಕ ಕೇಂದ್ರ ಸರ್ಕಾರ ತನ್ನ ಬಧ್ದತೆಯನ್ಮು ಪ್ರದರ್ಶಿಸಬೇಕೆಂದು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ವಿನಂತಿಸಿಕೊಂಡಿದ್ದಾರೆ.
Previous Post Next Post