ಉದಯಪುರ ಘಟನೆ ಅಮಾನವೀಯ: ಎಸ್ಸೆಸ್ಸೆಫ್ ಖಂಡನೆ

ಉದಯಪುರ ಘಟನೆ ಅಮಾನವೀಯ: ಎಸ್ಸೆಸ್ಸೆಫ್ ಖಂಡನೆ 
ಜಗತ್ತಿಗೆ ಶಾಂತಿ ಸೌಹಾರ್ದತೆಯ ಪಾಠ ಕಲಿಸಿದ ಮೊಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ಅವರ ಬಗ್ಗೆ ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ ವ್ಯಕ್ತಿಯನ್ನು ಕೊಂದು ಹಾಕಿದ ಪ್ರಕರಣ ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದು ಇದನ್ನು ತೀವ್ರವಾಗಿ ಖಂಡಿಸಿದೆ.


ಪೈಗಂಬರ್ ಸಲ್ಲಲ್ಲಾಹು ಅಲೈಹಿವ ಸಲ್ಲಮ್ ರವರ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದು ಅಕ್ಷಮ್ಯ. ಆದರೆ ಇಂತಹ ಸಮಯಗಳಲ್ಲಿ ಕ್ಷಮೆ ನೀಡಿದ ಪರಂಪರೆಯಾಗಿದೆ ನಮಗಿರುವುದು. ಅಂತಹವರನ್ನು ಕೊಂದುಹಾಕಿ ಸಾಮರಸ್ಯ ಕದಡುವ ಕ್ಷುದ್ರ ಶಕ್ತಿಗಳು ಇಸ್ಲಾಮಿನ ಬಾಲ ಪಾಠವೂ ಕಲಿತಿಲ್ಲ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರು ಅಬ್ದುಲ್ ಲತೀಫ್ ಸಅದಿ ಹೇಳಿದರು.
Previous Post Next Post