ರಾಷ್ಟ್ರಪತಿ ಚುನಾವಣೆ: ಶೇ. 99 ರಷ್ಟು ಮತದಾನ, ಫಲಿತಾಂಶ ಜುಲೈ 21 ಕ್ಕೆ

ರಾಷ್ಟ್ರಪತಿ ಚುನಾವಣೆ: ಶೇ. 99 ರಷ್ಟು ಮತದಾನ, ಫಲಿತಾಂಶ ಜುಲೈ 21 ಕ್ಕೆ

ಇಂದು ರಾಷ್ಟ್ರಪತಿ ಚುನಾವಣೆಯಲ್ಲಿ ಶೇ.99.18ರಷ್ಟು ಮತದಾನ ನಡೆಸಲಾಗಿದೆ. ವಿಪಕ್ಷಗಳ ಎಂಟು ಸದಸ್ಯರು ಮತದಾನ ಮಾಡಿಲ್ಲ.

ಈ ಬಗ್ಗೆ ರಾಜ್ಯ ಸಭೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮುಖ್ಯ ಚುನಾವಣಾಧಿಕಾರಿ ಪಿ.ಸಿ ಮೋದಿ ಮಾಹಿತಿ ನೀಡಿದ್ದು, 727 ಸಂಸದರು ಮತ್ತು 9 ವಿಧಾನಸಭೆ ಸದಸ್ಯರನ್ನು ಒಳಗೊಂಡ 736 ಮತದಾರರಲ್ಲಿ 721 ಸಂಸದರು ಮತ್ತು 9 ವಿಧಾನಸಭೆ ಸದಸ್ಯರನ್ನು ಒಳಗೊಂಡ 730 ಮತದಾರರು ಮತ ಚಲಾಯಿಸಿದರು.

ಶೇ.99.18ರಷ್ಟು ಮತದಾನವಾಗಿದೆ ಎಂದು ತಿಳಿಸಿದರು. ಭಾರತದ 15 ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಸೋಮವಾರ ಸಂಜೆ 5 ಗಂಟೆಗೆ ಚುನಾವಣೆಗಳು ಕೊನೆಗೊಂಡವು, ದೇಶಾದ್ಯಂತ ಸಂಸದರು ಮತ್ತು ಶಾಸಕರು ವಿರೋಧ ಪಕ್ಷದ ಯಶವಂತ್ ಸಿನ್ಹಾ ಮತ್ತು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಿದರು.

ಮತ ಎಣಿಕೆ ಕಾರ್ಯ ಜುಲೈ.21ರಂದು ನಡೆಯಲಿದೆ. ಕಣದಲ್ಲಿ ಇರುವಂತ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾ ಯಾರು ಗೆಲ್ಲಲಿದ್ದಾರೆ ಎಂಬುದು ಅಂದು ಹೊರ ಬೀಳಲಿದೆ. ಹೀಗಾಗಿ ಎಲ್ಲರ ಚಿತ್ತ ಜುಲೈ.21ರತ್ತ ಈಗ ನೆಟ್ಟಿದೆ.
Previous Post Next Post