ಚಿತ್ರದುರ್ಗದಲ್ಲಿ ಇಂದಿನಿಂದ ಎರಡು ದಿನಗಳ ಸುನ್ನಿ ಇಜ್ತಿಮಾ

ಚಿತ್ರದುರ್ಗದಲ್ಲಿ ಇಂದಿನಿಂದ ಎರಡು ದಿನಗಳ ಸುನ್ನಿ ಇಜ್ತಿಮಾ


ಚಿತ್ರದುರ್ಗ: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಹಮ್ಮಿಕೊಂಡ 'ಪರ್ವಾಝ್' ಗ್ರಾಂಡ್ ಸುನ್ನಿ ಇಜ್ತಿಮಾ ಇಂದಿನಿಂದ ಎರಡು ದಿನಗಳ ಕಾಲ ಚಿತ್ರದುರ್ಗದ ಸಿಬಾರ ಇಹ್ಸಾನ್ ನಾಲೇಜ್ ನಲ್ಲಿ ನಡೆಯಲಿದೆ.  
ಉತ್ತರ ಕರ್ನಾಟಕದ ಹನ್ನೆರಡು ಜಿಲ್ಲೆಗಳಿಂದ ಆಹ್ವಾನಿತ ಮುನ್ನೂರರಷ್ಟು ಕಾರ್ಯಕರ್ತರು ಇಜ್ತಿಮಾದಲ್ಲಿ ಭಾಗವಹಿಸಲಿದ್ದಾರೆ.

ಹತ್ತು ಸೆಷನ್ ಗಳಲ್ಲಿ ನಡೆಯುವ ಆಧ್ಯಾತ್ಮಿಕ ತರಗತಿಗಳು, ಖುರಾನ್ ಪಾರಾಯಣ, ಜಲಾಲಿಯಾ ಮಜ್ಲಿಸ್, ಪ್ರಾಯೋಗಿಕ ತರಗತಿಗಳು, ವಿವಿಧ ಯೋಜನೆಗಳ ಕಾರ್ಯರೂಪ, ಮತ್ತು ಸಮಾರೋಪ ಸಂಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. 
ಇಂದು (ಶನಿವಾರ) ಮೂರು ಗಂಟೆಯಿಂದ ರಿಜಿಸ್ಟ್ರೇಶನ್ ಆರಂಭವಾಗಲಿದ್ದು, ಐದು ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಸಂಜೆ ಐದು ಮೂವತ್ತರಿಂದ ಉದ್ಘಾಟನಾ ಸೆಷನ್ ನಡೆಯಲಿದೆ. ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಕಾರ್ಯಕ್ರಮ ಕೊನೆಗೊಳ್ಳಲಿದೆ.
أحدث أقدم