ಅಮಾಯಕರ ಕೊಲೆಸರಣಿ ಮುಂದುವರಿಯದಿರಲಿ: ಎಸ್ಸೆಸ್ಸೆಫ್
ಕೊಲೆಗಳು ಯಾವುದಕ್ಕೂ ಪರಿಹಾರವಲ್ಲ. ಸಮಾಜದಲ್ಲಿ ಅಶಾಂತಿ ಹುಟ್ಟಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವವರಿದ್ದಾರೆ.ಅಂತಹ ದುಷ್ಕರ್ಮಿಗಳಿಂದಲೇ ಹಲವು ಕುಟುಂಬಗಳು ಅನಾತರಾಗಿ ಮಾರ್ಪಟ್ಟಿದ್ದು. ನಾಗರಿಕ ಸಮಾಜವು ಅವರನ್ನು ಕಂಡರಿಯಬೇಕು.ಆದ್ದರಿಂದ ಸರಣಿ ಕೊಲೆಗಳು ಕೊನೆಗೊಳ್ಳಲಿ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪತ್ರಿಕಾಪ್ರಕಟನೆಯಲ್ಲಿ ಆಗ್ರಹಿಸಿದೆ.
ತಪ್ಪಿತಸ್ಥರಿಗೆ ಕಾನೂನಿನ ಮೂಲಕ ಶಿಕ್ಷೆಯಾಗಬೇಕು. ಆದರೆ ಬೀದಿ ಕೊಲೆಗಳಿಂದಾಗಿ ರಾಜ್ಯದ ಜನಸಾಮಾನ್ಯರು ಭಯಭೀತರಾಗಿದ್ದಾರೆ. ಮಸೂದ್ ಹಾಗೂ ಪ್ರವೀಣ್ ಹತ್ಯೆಗಳೆರಡನ್ನೂ ಸರಕಾರವು ಸಮಾನ ದೃಷ್ಟಿಯಿಂದ ನೋಡಬೇಕು. ಇಂತಹ ಸಂದರ್ಭಗಳ ದುರ್ಲಾಭ ಪಡೆಯುವವರ ಬಗ್ಗೆ ಸಮಾಜವು ಎಚ್ಚರದಲ್ಲಿರಬೇಕು. ಯಾವುದೇ ಪ್ರಕರಣಲ್ಲಿ ಒತ್ತಡದ ನೆಪದಲ್ಲಿ ಅಮಾಯಕರ ಬಂಧನವಾಗಬಾರದು. ಆ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಕೈಗೊಳ್ಳಬೇಕೆಂದು ಎಸ್ಸೆಸ್ಸೆಫ್ ಪತ್ರಿಕಾಪ್ರಕಟನೆಯಲ್ಲಿ ಆಗ್ರಹಿಸಿದೆ.