ಮುಸ್ಲಿಮ್ ಸೆಂಟ್ರಲ್ ಕಮಿಟಿ ನಿಲುವು ಸ್ವಾಗತಾರ್ಹ: ಎಸ್ಸೆಸ್ಸೆಫ್

ಮುಸ್ಲಿಮ್ ಸೆಂಟ್ರಲ್ ಕಮಿಟಿ ನಿಲುವು ಸ್ವಾಗತಾರ್ಹ: ಎಸ್ಸೆಸ್ಸೆಫ್


ಕರಾವಳಿ ಜಿಲ್ಲೆಯಲ್ಲಿ ಮತ್ತೆ ಕೋಮುವೈಷಮ್ಯವು ಮತ್ತೆ ಕೊಲೆ ಸರಣಿಗೆ ಬಂದು ನಿಂತಿದೆ. ಜಿಲ್ಲೆಯಲ್ಲಿ ಮೂರು ಹತ್ಯೆಗಳು ನಡೆದಿದ್ದರೂ ಓರ್ವರ ಮನೆಗೆ ಮಾತ್ರ ಭೇಟಿ ಕೊಡುವ ಮೂಲಕ ಮುಖ್ಯಮಂತ್ರಿಗಳು ತಾರತಮ್ಯ ನೀತಿ ಅನುಸರಿಸಿದ್ದಾರೆ.  ಆ ನಿಟ್ಟಿನಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿಯು ತಳೆದಿರುವ ನಿಲುವು ಸ್ವಾಗತಾರ್ಹವಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸ‌ಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. 

ಸರಕಾರವೇ ಬಹಿರಂಗವಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಬಹಿಷ್ಕರಿಸಿರುವುದನ್ನು ಪ್ರಜ್ಞಾವಂತ ನಾಗರಿಕ ಸಮಾಜ ಒಪ್ಪದು. 
ಈ ರೀತಿ ಒಂದೇ ಮನೆಗೆ ಭೇಟಿ ನೀಡಿ ಉಳಿದವರನ್ನು ನಿರ್ಲಕ್ಷಿಸಲು ಕಾರಣವೇನೆಂದು ರಾಜ್ಯದ ಜನತೆಯ ಮುಂದೆ ರಾಜ್ಯದ ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು.  ಹಂತಕರನ್ನು ಬಂಧಿಸಬೇಕೆಂಬ ಒತ್ತಡಕ್ಕೊಳಗಾಗಿ ಪೊಲಿಸ್ ಇಲಾಖೆಯು ಅಮಾಯಕರನ್ನು ಬಂಧಿಸದಂತೆ ಸರಕಾರವು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
Previous Post Next Post