ಶ್ರೀರಾಮ್ ವೆಂಕಟರಾಮ್ ಆಲಪ್ಪುಝ ಲ್ಲಾಧಿಕಾರಿ ಸ್ಥಾನದಿಂದ ವಜಾ: ಕೆಎಂಜೆ ಬೃಹತ್ ಪ್ರತಿಭಟನೆಯ ನಂತರ ಕೇರಳ ಸರಕಾರದ ಆದೇಶ
ಸಿರಾಜ್ ಪತ್ರಿಕೆಯ ತಿರುವನಂತಪುರಂ ಘಟಕದ ಮುಖ್ಯಸ್ಥರಾಗಿದ್ದ ಕೆ ಎಂ ಬಶೀರ್ ಅವರನ್ನು ಮದ್ಯಪಾನ ಮಾಡಿ ಮಧ್ಯರಾತ್ರಿಯಲ್ಲಿ ಅತಿ ವೇಗ ಕಾರು ಚಲಾಯಿಸಿ ಡಿಕ್ಕಿ ಹೊಡೆದು ಕೊಂದ ಪ್ರಮುಖ ಆರೋಪಿ ಶ್ರೀರಾಮ್ ವೆಂಕಟರಾಮ್ ಅವರನ್ನು ಆಲಪ್ಪುಝ ಜಿಲ್ಲಾಧಿಕಾರಿ ಸ್ಥಾನದಿಂದ ಕೇರಳ ಸರಕಾರ ವಜಾ ಮಾಡಿದೆ. ಕೇರಳ ಮುಸ್ಲಿಮ್ ಜಮಾಅತ್ ನಾಯಕತ್ವ ನೀಡಿದ ಸುನ್ನಿ ಸಂಘ ಕುಟುಂಬದ ಬೃಹತ್ ಪ್ರತಿಭಟನೆಯ ನಂತರ ಕ್ರಮ ಕೈಗೊಳ್ಳಲಾಗಿದೆ. ವಿ ಆರ್ ಕೃಷ್ಣ ತೇಜ ಅವರು ಆಲಪ್ಪುಝ ಜಿಲ್ಲೆಯ ಹೊಸ ಕಲೆಕ್ಟರಾಗಿ ನೇಮಕಗೊಂಡಿದ್ದಾರೆ.
ಕಳೆದ ಶನಿವಾರ ಕೇರಳದ 14 ಜಿಲ್ಲೆಗಳಲ್ಲಿ ಕಲೆಕ್ಟರೇಟ್ ಮಾರ್ಚ್ ಹಮ್ಮಿಕೊಳ್ಳಲಾಗಿತ್ತು. ಶ್ರೀರಾಮ್ ಅವರು ಕಳೆದ ಸೋಮವಾರ ಅಧಿಕಾರ ಸ್ವೀಕರಿಸಿದ್ದರು