ಈ ದಿನದ ಸಂದೇಶ- Eid-ul-Azha Mubark 🌙

ಈ ದಿನದ ಸಂದೇಶ-
Eid-ul-Azha Mubark 🌙

ಮತ್ತೊಮ್ಮೆ ಈದುಲ್ ಅಝ್'ಹಾ ಬಕ್ರೀದ್ ಹಬ್ಬ ನಮ್ಮೆಡೆಗೆ ಆಗಮನವಾಗಿದೆ. ಸುಖ, ಶಾಂತಿ, ಸಹೋದರ್ಯತೆಯ ಸಂದೇಶವನ್ನು ಸಾರುವ ಈದ್-ಉಲ್-ಅಝ್'ಹಾ ಜಗತ್ತಿನೆಲ್ಲೆಡೆ ಶಾಂತಿಯನ್ನು ತರಲಿ ಎಂದು ಹಾರೈಸುತಿದ್ದೇವೆ. ದೇಶಾದ್ಯಾಂತ ಕಲುಷಿತಗೊಂಡ ವಾತಾವರಣವನ್ನು ತಿಳಿಗೊಳಿಸಲು ಈ ಬಕ್ರೀದ್ ಗೆ ಸಾಧ್ಯವಾಗಲಿ. ಅದಾಗಿರಲಿ ಈ ದಿನದ ಸಂದೇಶ. 


ಬೀವಿ ಹಾಜರ, ಇಬ್ರಾಹೀಂ ನೆಬಿ, ಇಸ್ಮಾಈಲ್ ನೆಬಿ ಅಲೈಹಿಸ್ಸಲಾಮರ ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಾ ಬಕ್ರೀದ್ ಹಬ್ಬವನ್ನು ಜಗತ್ತು ಆಚರಿಸುತ್ತಿದೆ. ಈ ಮಹಾತ್ಮರುಗಳ ಆದರ್ಶಗಳು ನಮ್ಮ ಜೀವನ ಬದಲಾವಣೆಗೆ ಪಾಠವಾಗಲಿ. 


ಈ ಪುಣ್ಯ ದಿನದಂದು ಎಲ್ಲರೂ ಪರಸ್ಪರ ದ್ವೇಷ ವೈಷಮ್ಯಗಳನ್ನು ಮರೆತು ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಸಾರಿಕೊಂಡು ಈದ್ ಆಚರಿಸೋಣ. 


ಎಲ್ಲರಿಗೂ ಮತ್ತೊಮ್ಮೆ ಸುಖ ಶಾಂತಿಯನ್ನು ಬಯಸುತ್ತಾ 'ಈದುಲ್ ಅಝ್'ಹಾ' ಶುಭಾಶಯಗಳನ್ನು ಅರ್ಪಿಸುತ್ತಿದ್ದೇವೆ. ನಾಡಿನಲ್ಲಿ ಶಾಂತಿ ನೆಲೆಸಲು, ಸುಂದರವಾದ ನಾಡನ್ನು ಕಟ್ಟಲು ಪ್ರಯತ್ನಿಸೋಣ. ಕೇವಲ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಸಮಾಜದಲ್ಲಿ ಒಡಕು ಹುಟ್ಟಿಸಿ ಶಾಂತಿ ಕದಡಲು ಪ್ರಯತ್ನಿಸುತ್ತಿರುವ ಕಾಣದ ಕೈಗಳನ್ನು ಅರಿಯೋಣ. ವರುಣಾರ್ಭಟಕ್ಕೆ ತತ್ತರಿಸಿರುವ ಕರಾವಳಿಯನ್ನು ಮೆಲಕ್ಕೆತ್ತೋಣ. ಮಹಾಮಳೆಗೆ ಅಸ್ತವ್ಯಸ್ತಗೊಂಡ ಬಡ ಜೀವಗಳಿಗೆ ನೆರವಾಗೋಣ. ಇದುವೇ ಈ ದಿನದ ಸಂದೇಶ 


ಈ ಪುಣ್ಯ ದಿನಗಳಲ್ಲಿ ದುಆ ಮರೆಯಬೇಡಿ.

🌙عيد مبــــــــــــــــــــارك💫

تقبل الله منا ومنكم صالح الأعمال
كل عام وانتم بخير

_________________________________
MSM ಜುನೈದ್ ಹಿಮಮಿ ಸಖಾಫಿ ಚಿತ್ರದುರ್ಗ
(ಸದಸ್ಯರು SSF ರಾಜ್ಯ ಸಮಿತಿ)


10/07/2022 #ಮಾಣಿ, ಮಂಗಳೂರು
Previous Post Next Post