ತ್ಯಾಗ ಬಲಿದಾನಗಳನ್ನು ಸ್ಮರಿಸುತ್ತಾ ಅರಫಾದಲ್ಲಿ ಬೃಹತ್ ಸಂಗಮ, ಸೂರ್ಯಾಸ್ತಮಾನದೊಂದಿಗೆ ಮುಝ್ದಲಿಫದೆಡೆಗೆ ಹಜ್ಜಾಜಿಗಳು
ಹಾಜಿಗಳು ಬಣ್ಣ, ಜಾತಿ, ಗೋತ್ರ, ದೇಶ, ಭಾಷೆಯ ಬೇಧವಿಲ್ಲದೆ ಅರಫಾದತ್ತ ಸಾಗಿ, ತಲ್ಬಿಯತ್ ಮಂತ್ರಗಳನ್ನು ಪಠಿಸುತ್ತಾ ಪಠಿಸುತ್ತಾ ಪ್ರಾರ್ಥನೆಯಲ್ಲಿ ತಲ್ಲೀನರಾದರು. ಹಜ್ ಕರ್ಮದ ಎರಡನೇ ದಿನವಾದ ಇಂದಾಗಿದೆ ಪ್ರಮುಖ ಕರ್ಮ ಅರಫಾ ಸಂಗಮ.
ಇಂದು ಹಾಜ್ಜಾಜಿಗಳು ಅವರು ಪಾಪ ಮೋಚನೆ, ಪ್ರಾರ್ಥನೆ ಮತ್ತು ಕುರಾನ್ ಪಠಣದೊಂದಿಗೆ ಸೂರ್ಯಾಸ್ತದವರೆಗೆ ಅರಫಾದಲ್ಲಿ ಉಳಿಯುತ್ತಾರೆ. ಸೂರ್ಯಾಸ್ತದ ಸಮಯದಲ್ಲಿ ಅರಫಾದಿಂದ ಹೊರಟು ಮುಜ್ದಲಿಫಾ ಕಡೆಗೆ ತೆರಳುವರು. ಅಲ್ಲಿ ರಾತ್ರಿ ಕಳೆಯುತ್ತಾರೆ. ನಂತರ ಮಗ್ರಿಬ್ ಮತ್ತು ಇಶಾ ಮುಝ್ಪದಲಿಫಾದಲ್ಲಿ ನಮಾಝ್ ನಯಲಿದೆ.