ಸುಳ್ಯ ಮಸೂದ್ ಬರ್ಬರ ಕೊಲೆ: ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು SჄS ಆಗ್ರಹ
ಸುಳ್ಯ ತಾಲೂಕಿನ ಬೆಳ್ಳಾರೆ ಕಳಂಜದಲ್ಲಿ ಮುಹಮ್ಮದ್ ಮಸೂದ್ ಎಂಬ ಹತ್ತೊಂಬತ್ತು ವಯಸ್ಸಿನ ಯುವಕನನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಬರ್ಬರವಾಗಿ ಹೊಡೆದು ಕೊಲೆಮಾಡಿದ್ದು ಎಂಟು ಮಂದಿ ಹಂತಕರನ್ನು ಈಗಾಗಲೇ ಪೋಲೀಸರು ಬಂಧಿಸಿದ್ದಾರೆ.
ಅಮಾಯಕ ಯುವಕನೊಬ್ಬ ಮತಾಂಧ ತಂಡದಿಂದ ಭೀಕರವಾಗಿ ಕೊಲೆಯಾಗಿದ್ದಾನೆ. ನಾಗರಿಕ ಸಮಾಜ ತಲೆತಗ್ಗಿಸುವಂತಹ ಕ್ರೂರ ಕೃತ್ಯ ಇದಾಗಿದ್ದು ಎಲ್ಲ ಸಮುದಾಯ ಬಾಂಧವರು ಇದನ್ನು ಖಂಡಿಸಬೇಕಾಗಿದೆ. ತಪ್ಪಿತಸ್ಥರಿಗೆ ಮಾದರೀ ಯೋಗ್ಯವಾದ ಕಠಿಣ ಶಿಕ್ಷೆ ನೀಡಬೇಕು ಹಾಗೂ ಮೃತನ ಕುಟುಂಬಕ್ಕೆ ಕನಿಷ್ಠ ಐವತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸುನ್ನೀ ಯುವಜನ ಸಂಘದ ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ. ಝೈನೀ ಕಾಮಿಲ್ ಆಗ್ರಹಿಸಿದ್ದಾರೆ.