ಗೋಪುರಗಳ ಧ್ವಂಸದ ವೇಳೆ ಭದ್ರತೆ ಮತ್ತು ಸಂಚಾರವನ್ನು ನಿರ್ವಹಿಸಲು 400 ಕ್ಕೂ ಹೆಚ್ಚು ನಾಗರಿಕ ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತಿ ಇರುವರು. ಅಷ್ಟೇ ಅಲ್ಲದೇ, ಪೊಲೀಸ್ ಸಿಬ್ಬಂದಿಯನ್ನು ಹೊರತುಪಡಿಸಿ, ಎಂಟು ಆಂಬ್ಯುಲೆನ್ಸ್ ಗಳು, ನಾಲ್ಕು ಅಗ್ನಿಶಾಮಕ ಟೆಂಡರ್‌ಗಳು ಮತ್ತು ಎನ್ಡಿಆರ್ಎಫ್ ಸ್ಥಳದಲ್ಲಿ ಹಾಜರಿರುವರು. 3 ಆಸ್ಪತ್ರೆಗಳಲ್ಲಿ ತಾತ್ಕಾಲಿಕ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಅಗತ್ಯಬಿದ್ದರೆ ಹಸಿರು ಕಾರಿಡಾರ್ ನಿರ್ಮಿಸಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ರಾಜೇಶ್ ಎಸ್ ಹೇಳಿದ್ದಾರೆ.
ಗೋಪುರ ನೆಲಸಮಗೊಳಿಸುವ ಮುನ್ನ ಸುಮಾರು ನಾಲ್ಕು ಸಾವಿರ ಜನರನ್ನು ಮತ್ತು ಅವರ 3100 ಕಾರುಗಳನ್ನು ಸಹ ಸ್ಥಳಾಂತರಿಸಲಾಗುವುದು. ಸೊಸೈಟಿಯ ಸದಸ್ಯರ ಅನುಕೂಲಕ್ಕಾಗಿ ಸೊಸೈಟಿಯ ಹೊರಗೆ ಸಹಾಯ ಡೆಸ್ಕ್ ಅನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ .
ಸುಪ್ರೀಂ ಕೋರ್ಟ್ ಆದೇಶದಂತೆ ನೋಯ್ಡಾದ ಸೆಕ್ಟರ್ 93 ಎ ನಲ್ಲಿರುವ ಸೂಪರ್ ಟೆಕ್‌ನ ಅಕ್ರಮ ಅವಳಿ ಗೋಪುರಗಳನ್ನು ( twin towers in Noida ) ಆಗಸ್ಟ್ 28ರ ಭಾನುವಾರ ಮಧ್ಯಾಹ್ನ 2.30ಕ್ಕೆ ನೆಲಸಮಗೊಳಿಸಲಾಗುವುದು. ದೆಹಲಿಯ ಕುತುಬ್ ಮಿನಾರ್ ಗಿಂತ ( Delhi's Qutub Minar ) ಎತ್ತರವಾಗಿರುವ ಈ ಕಟ್ಟಡ ನಿಯಮ ಬಾಹಿರವಾಗಿ ನಿರ್ಮಾಣ ಮಾಡಲಾಗಿದೆ. ಈ ಎರಡು ಗೋಪುರಗಳಲ್ಲಿ 900ಕ್ಕೂ ಹೆಚ್ಚು ಫ್ಲ್ಯಾಟ್‌ಗಳಿವೆ. ಟವರ್ ಗಳು ಸೂಪರ್ ಟೆಕ್ ನ ಎಮರಾಲ್ಡ್ ಕೋರ್ಟ್ ಯೋಜನೆಯ ಭಾಗವಾಗಿವೆ. ಎರಡೂ ಗೋಪುರಗಳು ಒಟ್ಟಾಗಿ ಸುಮಾರು 7.5 ಲಕ್ಷ ಚದರ ಅಡಿ ಪ್ರದೇಶವನ್ನು ಆವರಿಸಿವೆ.
ಕಳೆದ ವರ್ಷ ಆಗಸ್ಟ್ 31 ರಂದು ಸುಪ್ರೀಂ ಕೋರ್ಟ್ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ಅವಳಿ ಗೋಪುರಗಳನ್ನು ನೆಲಸಮಗೊಳಿಸಲು ಆದೇಶಿಸಿತ್ತು.