ಏಷ್ಯಾ ದೈತ್ಯರ ಟಿ20 ಜೋಶ್: ಇಂದು ಇಂಡೋಪಾಕ್ ಹೈ ವೋಲ್ಟೇಜ್ ಪಂದ್ಯ

ಏಷ್ಯಾ ದೈತ್ಯರ ಟಿ20 ಜೋಶ್, ಇಂದು ಇಂಡೋಪಾಕ್ ಹೈ ವೋಲ್ಟೇಜ್ ಪಂದ್ಯ  
ದುಬೈ: ಸಾಂಪ್ರದಾಯಿಕ ಹಾಗೂ ಬದ್ಧ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವಿನ ಮತ್ತೊಂದು ರೋಚಕ ಕ್ರಿಕೆಟ್‌ ಹಣಾಹಣಿಗೆ ಕಾಲ ಕೂಡಿಬಂದಿದೆ. ಇಂದು ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ರೋಹಿತ್‌ ಶರ್ಮ-ಬಾಬರ್‌ ಆಜಂ ಪಡೆಗಳು ಪರಸ್ಪರ ಎದುರಾಗಲಿವೆ. ಈ ಮೂಲಕ ಕ್ರಿಕೆಟ್‌ ಜಗತ್ತಿನಲ್ಲಿ ಭಾರೀ ಸಂಚಲನ ಮೂಡಲಿದೆ.

ಇದು ಎರಡೂ ತಂಡಗಳಿಗೆ ಕೂಟದ ಆರಂಭಿಕ ಪಂದ್ಯವಾದರೂ ಫೈನಲ್‌ ಸ್ಪರ್ಧೆಗೂ ಮಿಗಿಲಾದ ಕೌತುಕ, ರೋಮಾಂಚನ, ನಿರೀಕ್ಷೆಗಳನ್ನು ಮೂಡಿಸಿದೆ. ಸ್ವಾರಸ್ಯವೆಂದರೆ, ಈವರೆಗಿನ 14 ಏಷ್ಯಾ ಕಪ್‌ ಕೂಟಗಳಲ್ಲಿ ಒಮ್ಮೆಯೂ ಭಾರತ-ಪಾಕಿಸ್ತಾನ ಫೈನಲ್‌ನಲ್ಲಿ ಮುಖಾಮುಖೀ ಆಗಿಲ್ಲ!

ಭಾರತ ಅತ್ಯಧಿಕ 7 ಸಲ, ಪಾಕಿಸ್ತಾನ 2 ಸಲ ಚಾಂಪಿಯನ್‌ ಆಗಿವೆ. ಆದರೆ ಈ ಎರಡೂ ತಂಡಗಳು ಫೈನಲ್‌ನಲ್ಲಿ ಎದುರಿಸಿದ್ದು ಶ್ರೀಲಂಕಾ ಮತ್ತು ಬಾಂಗ್ಲಾದೇಶವನ್ನು! ಈ ಸಲವಾದರೂ ಭಾರತ-ಪಾಕಿಸ್ತಾನ ಪ್ರಶಸ್ತಿ ಸಮರದಲ್ಲಿ ಎದುರಾಗಬಹುದೇ ಎಂಬುದು ಅಭಿಮಾನಿಗಳ ಕುತೂಹಲ.


ತಂಡಗಳು
ಭಾರತ: ರೋಹಿತ್‌ ಶರ್ಮ (ನಾಯಕ), ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ದೀಪಕ್‌ ಹೂಡಾ, ದಿನೇಶ್‌ ಕಾರ್ತಿಕ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಆರ್‌.ಅಶ್ವಿ‌ನ್‌, ಯಜುವೇಂದ್ರ ಚಹಲ್‌, ರವಿ ಬಿಷ್ಣೋಯಿ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಆವೇಶ್‌ ಖಾನ್‌.

ಪಾಕಿಸ್ತಾನ: ಬಾಬರ್‌ ಆಜಂ (ನಾಯಕ), ಶದಾಬ್‌ ಖಾನ್‌, ಆಸಿಫ್ ಅಲಿ, ಫ‌ಖರ್‌ ಜಮಾನ್‌, ಹೈದರ್‌ ಅಲಿ, ಹ್ಯಾರಿಸ್‌ ರೌಫ್, ಇಫ್ತಿಕಾರ್‌ ಅಹ್ಮದ್‌, ಖುಷಿªಲ್‌ ಶಾ, ಮೊಹಮ್ಮದ್‌ ನವಾಜ್‌, ಮೊಹಮ್ಮದ್‌ ರಿಜ್ವಾನ್‌, ನಸೀಮ್‌ ಶಾ, ಶಹನವಾಜ್‌ ದಹಾನಿ, ಉಸ್ಮಾನ್‌ ಖಾದಿರ್‌, ಮೊಹಮ್ಮದ್‌ ಹಸ್ನೇನ್‌, ಹಸನ್‌ ಅಲಿ.

ಇಂದಿನ ಪಂದ್ಯ
ಸ್ಥಳ: ದುಬೈ
ಪಂದ್ಯಾರಂಭ: ರಾತ್ರಿ 7.30
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ಮುಖಾಮುಖಿ
ಒಟ್ಟು ಪಂದ್ಯ 9
ಭಾರತ ಜಯ 7
ಪಾಕ್‌ ಜಯ 2

Previous Post Next Post