ಕೂಡಿ ಬಾಳೋಣ ಬನ್ನಿ, ದೇಶದ ಅಖಂಡತೆಯನ್ನು ಕಾಪಾಡೋಣ

ಕೂಡಿ ಬಾಳೋಣ ಬನ್ನಿ, ದೇಶದ ಅಖಂಡತೆಯನ್ನು ಕಾಪಾಡೋಣ
ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಶುಭಾಶಯಗಳು. ಭಾರತ ಸ್ವತಂತ್ರ್ಯಗೊಂಡು ಎಪ್ಪತ್ತೈದು ಸಂವತ್ಸರಗಳು ದಾಟಿತು. ಸುಂದರವಾದ ದೇಶದಲ್ಲಿ ಜಾತಿ ಮತ ಭೇದಗಳನ್ನು ಮರೆತು ಭಾರತೀಯನಾಗಿ ಬಾಳಿ ದೇಶದ ಸೌಹಾರ್ದತೆ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ. ಎಪ್ಪತ್ತೈದರ ಹೊಸ್ತಿಲಲ್ಲಿರುವ ನಾವು ಅದಕ್ಕೆ ಪಣ ತೊಟ್ಟು ಪ್ರಯತ್ನಿಸಬೇಕಾಗಿದೆ.  ದುಷ್ಟಶಕ್ತಿಗಳು ತಮ್ಮ ಮತ ಬ್ಯಾಂಕಿಗಾಗಿ ದೇಶದಲ್ಲಿ ಕೋಮುಜ್ವಾಲೆಯನ್ನು ಹರಡಲು ಪ್ರಯತ್ನಿಸುತ್ತಿರುವಾಗ ನಾವು ಅದಕ್ಕೆ ತಣ್ಣೀರೆರಚುವ ಕೆಲಸ ಮಾಡಬೇಕೆ ಹೊರತು ಹೊತ್ತಿ ಹುರಿಯುವಂತೆ ಮಾಡಬಾರದು. 

ಜಾತಿ ಮತ ಭೇದ ಮರೆತು ಕೂಡಿ ಬಾಳೋಣ, ಸೌಹಾರ್ದ ಸುಂದರ ಭಾರತವನ್ನು ಕಟ್ಟೋಣ

ಸರ್ವ ಭಾರತೀಯರಿಗೂ ಈಗಿನ ಸುದ್ದಿಯ ಸ್ವತಂತ್ರ ಅಮೃತ ಮಹೋತ್ಸವದ ಶುಭಾಶಯಗಳು
Previous Post Next Post