ಎಸ್.ವೈ.ಎಸ್.30ನೇ ವರ್ಷಾಚರಣೆ: ನಾಳೆ ನೇತೃ ಸಂಗಮ
ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘದ ಮೂವತ್ತನೇ ವರ್ಷಾಚರಣೆಯ ಪ್ರಥಮ ಸಮಾಲೋಚನಾ ಸಭೆ 'ನೇತೃ ಸಂಗಮ'ವು ನಾಳೆ (ಆಗಸ್ಟ್ 16 ಮಂಗಳವಾರ) ಮಾಣಿ ದಾರುಲ್ ಇರ್ಶಾದ್ ಸಭಾಂಗಣದಲ್ಲಿ ನಡೆಯಲಿದೆ.
ವರ್ಷಾಚರಣೆ ಸಮಿತಿ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಂಗಮವನ್ನು ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಉಧ್ಘಾಟಿಸಲಿದ್ದಾರೆ
ಸಂಘಟನೆಯ ಕಳೆದ ಕಾಲದ ರಾಜ್ಯಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಹಾಗೂ 'ಪರ್ಲ್ ಬೋಡಿ' ಸದಸ್ಯರು ಪಾಲ್ಗೊಳ್ಳುವ ಸಂಗಮದಲ್ಲಿ ಒಂದು ವರ್ಷ ಕಾಲ ನಡೆಯಲಿರುವ ಮೂವತ್ತು ಅಂಶ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಗುವುದು.
ಸಂಗಮದಲ್ಲಿ ಸಂಘಟನೆಯ ಪ್ರಥಮ ರಾಜ್ಯಾಧ್ಯಕ್ಷ ಪಾತೂರು ಮುಹಮ್ಮದ್ ಫೈಝಿ ಮುಟ್ಟಂ,ರಾಜ್ಯಾಧ್ಯಕ್ಷರುಗಳಾಗಿದ್ದ ಕೆಪಿ ಹುಸೈನ್ ಸಅದಿ ಕೆಸಿ ರೋಡ್, ಅಬೂ ಸುಫ್ಯಾನ್ ಮದನಿ,ಜಿ.ಎಂ.ಕಾಮಿಲ್ ಸಖಾಫಿ, ಉಸ್ಮಾನ್ ಸಅದಿ ಪಟ್ಟೋರಿ,ಪ್ರಧಾನ ಕಾರ್ಯದರ್ಶಿಗಳಾಗಿದ್ದ ಮುಹಮ್ಮದ್ ಸಅದಿ ವಳವೂರು, ಪಿಕೆ ಮುಹಮ್ಮದ್ ಮದನಿ,ಎಸ್.ಪಿ. ಹಂಝ ಸಖಾಫಿ, ಡಿ.ಕೆ.ಉಮರ್ ಸಖಾಫಿ ಹಾಗೂ,ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಅಬ್ದುಲ್ ಲತೀಫ್ ಸಅದಿ ಶಿಮೋಗ ಪಾಲ್ಗೊಂಡು ಶುಭಹಾರೈಸುವರು.
2023ನೇ ವರ್ಷವನ್ನು ಎಸ್.ವೈ. ಎಸ್.ಮೂವತ್ತನೇ ವರ್ಷಾಚರಣೆಯಾಗಿ ವಿಜೃಂಭಣೆಯಿಂದ ನಡೆಸಲು ಅಗತ್ಯವಾದ ಸಿಧ್ದತೆಗಳು ನಡೆಯುತ್ತಿರುವುದಾಗಿ ರಾಜ್ಯಾಧ್ಯಕ್ಷ ಡಾ ಎಮ್ಮೆಸ್ಸೆಂ ಝೈನೀ ಕಾಮಿಲ್ ತಿಳಿಸಿದ್ದಾರೆ.