ರಾಜ್ಯದ ಸುನ್ನೀ ನಾಯಕರಿಂದ ಪಯಶ್ಶಿ ಉಸ್ತಾದ್ ಮನೆ ಸಂದರ್ಶನ
ಇತ್ತೀಚೆಗೆ ನಿಧನರಾದ ಕೇರಳ ಮುಸ್ಲಿಂ ಜಮಾಅತ್ ನಾಯಕ, ಪ್ರಸಿದ್ಧ ವಾಗ್ಮಿ ಎನ್.ಅಬ್ದುಲ್ಲತೀಫ್ ಸಅದಿ ಅವರ, ಕಣ್ಣೂರು ಜಿಲ್ಲೆಯ ಪಯಶ್ಶಿಯಲ್ಲಿರುವ ಮನೆಗೆ ಕರ್ನಾಟಕ ಸುನ್ನೀ ಸಂಘಟನೆಗಳ ಪ್ರತಿನಿಧಿಗಳು ಭೇಟಿ ನೀಡಿ ಪ್ರಾರ್ಥನೆ ನಡೆಸಿ ಸಾಂತ್ವನ ಹೇಳಿದರು.
ರಾಜ್ಯ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಯು.ಕೆ.ಮುಹಮ್ಮದ್ ಸಅದಿ ವಳವೂರು, ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ರಾಜ್ಯ ಸಮಿತಿ ಸದಸ್ಯ ಮಲ್ಲೂರು ಅಶ್‌ರಫ್ ಸಅದಿ, ಕರ್ನಾಟಕ ಮಜ್ಲಿಸುಲ್ ಉಲಮಾಇ ಸ್ಸಅದಿಯ್ಯೀನ್ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಇಸ್ಮಾಯಿಲ್ ಸಅದಿ ಕಿನ್ಯ, ಎಸ್.ವೈ. ಎಸ್. ದ.ಕ.ಈಸ್ಟ್ ಜಿಲ್ಲಾ ಕೋಶಾಧಿಕಾರಿ ಜಿ.ಮುಹಮ್ಮದ್ ಕುಂಞಿ ಉಪ್ಪಿನಂಗಡಿ ನಿಯೋಗದಲ್ಲಿದ್ದರು.
ಬಳಿಕ ಪಯಶ್ಶಿ ಜುಮಾ ಮಸ್ಜಿದ್‌ನ ಪರಿಸರದಲ್ಲಿರುವ ಖಬರ್ ಸ್ಥಾನದಲ್ಲಿ ಝಿಯಾರತ್ ನಿರ್ವಹಿಸಲಾಯಿತು.