ಭಾರಿ ಮಳೆಗೆ ಭೂ ಕುಸಿತ: ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ

ಭಾರಿ ಮಳೆಗೆ ಭೂ ಕುಸಿತ: ಮಂಗಳೂರು ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಘಾಟ್ ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ 

ಸುಳ್ಯ: ಭಾರಿ ಮಳೆಗೆ ಭೂ ಕುಸಿತವಾಗಿರುವುದರಿಂದ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಪಾಜೆ ಘಾಟ್ ನಲ್ಲಿ ಭಾರೀ ವಾಹನಗಳಿಗೆ ಸಂಚಾರ ನಿಷೇಧಿಸಲಾಗಿದೆ. 

ಸಂಪಾಜೆ ಘಾಟ್ ನ ಕೊಯನಾಡು ದೇವರಕೊಲ್ಲಿ  ಮದೆನಾಡು ಭಾಗಗಳಲ್ಲಿ ರಸ್ತೆ ಮಧ್ಯೆ ಬಿರುಕು ಕಂಡುಬಂದಿದ್ದು ಇದರಿಂದಾಗಿ ಭಾರೀ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬಸ್ ಹಾಗೂ ಲಘು ವಾಹನಗಳ ಸಂಚಾರಕ್ಕಷ್ಟೇ ಅನುಮತಿ ನೀಡಲಾಗಿದೆ.
Previous Post Next Post