ಕೆಸಿಎಫ್ ಇಂಟರ್‌ನ್ಯಾಷನಲ್ (INC) ಜನರಲ್ ಕೌನ್ಸಿಲ್ ಇಂದು ಜಿದ್ದಾದಲ್ಲಿ
ಸೌದಿ ಅರೇಬಿಯಾ: ಕೆಸಿಎಫ್ ಇಂಟರ್‌ನ್ಯಾಷನಲ್ ಜನರಲ್ ಕೌನ್ಸಿಲ್ ಸೌದಿ ಅರೇಬಿಯಾದ ಜಿದ್ದಾದ ರಮದಾ ವಿಂಡಮ್ ಕಾಂಟಿನೆಂಟಲ್ ನಲ್ಲಿ ಇಂದು (09/09/2022) ಮಧ್ಯಾಹ್ನದಿಂದ ನಡೆಯಲಿದೆ.
ಶೇಖುನಾ ಪೆರೋಡ್ ಅಬ್ದುಲ್ ರಹಮಾನ್ ಸಖಾಫಿ ಜನರಲ್ ಕೌನ್ಸಿಲ್ ಗೆ ನೇತೃತ್ವ ನೀಡಲಿದ್ದಾರೆ. ವಿವಿಧ ರಾಷ್ಟ್ರಗಳ ಕೆಸಿಎಫ್ INC ಕೌನ್ಸಿಲರ್ ಗಳು ಈಗಾಗಲೇ ಜಿದ್ದಾ ತಲುಪುತಿದ್ದು INC ಕೌನ್ಸಿಲ್ ನಲ್ಲಿ ಭಾಗವಹಿಸಲಿದ್ದಾರೆ.
ಕೆಸಿಎಫ್ ಅನಿವಾಸಿ ಕನ್ನಡಿಗರ ಹೆಮ್ಮೆಯ ಸುನ್ನಿ ಸಂಘಟನೆಯಾಗಿದ್ದು, ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಸಾಮಾಜ ಸೇವೆ ಮತ್ತು ಶೈಕ್ಷಣಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಕಾರ್ಯಕರ್ತರು ತಮ್ಮನ್ನು ತೊಡಗಿಸಿಕೊಂಡಿದ್ದು, ಆಧ್ಯಾತ್ಮಿಕ ಅನುಭೂತಿ ಕೂಡ ಕೆಸಿಎಫ್ ತನ್ನ ಕಾರ್ಯಕರ್ತರಿಗೆ ನೀಡುತ್ತಿದೆ.