ಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ: ಸೆ. ಹನ್ನೆರಡಕ್ಕೆ ಮಂಗಳೂರಿನಲ್ಲಿ ಜಿಲ್ಲಾ ನಾಯಕರ ಸಮಾವೇಶ

ಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ: ಸೆ. ಹನ್ನೆರಡಕ್ಕೆ ಮಂಗಳೂರಿನಲ್ಲಿ ಜಿಲ್ಲಾ ನಾಯಕರ ಸಮಾವೇಶ

ಕೋಝಿಕ್ಕೋಡ್: ಕೈದಪ್ಪೊಯಿಲ್‌ನಲ್ಲಿ ವಿಶಾಲವಾದ ನೂರೈವತ್ತು ಏಕರೆ ಭೂಮಿಯಲ್ಲಿ ನಿರ್ಮಾಣ ಪೂರ್ತಿಯಾಗುತ್ತಿರುವ ಮರ್ಕಝ್ ನಾಲೇಜ್ ಸಿಟಿಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ ಕೊನೆಯ ವಾರ ನಡೆಯಲಿದ್ದು ಇದರ ಅಂಗವಾಗಿ ಮಂಗಳೂರಿನಲ್ಲಿ  ಸೆಪ್ಟೆಂಬರ್ ಹನ್ನೆರಡರಂದು  ಸೋಮವಾರ ಸುನ್ನೀ ಸಂಘಟನಾ ನಾಯಕರ ಸಮಾವೇಶ ಹಮ್ಮಿಕೊಳ್ಳಲಾಗಿದೆ.

ಬೆಳಗ್ಗೆ ಹತ್ತು ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯುವ ಸಮಾವೇಶಕ್ಕೆ ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಾರ್ಥನೆಯ ಮೂಲಕ ಚಾಲನೆ ನೀಡುವರು.
ಮರ್ಕಝ್ ಸಖಾಫತಿಸ್ಸುನ್ನಿಯ್ಯ ಡೈರೆಕ್ಟರ್ ಜನರಲ್ ಹಾಗೂ ಕೇರಳ ಹಜ್ ಕಮಿಟಿ ಅಧ್ಯಕ್ಷ ಸಿ. ಮುಹಮ್ಮದ್ ಫೈಝಿ ಉಧ್ಘಾಟಿಸುವರು.
ಮರ್ಕಝ್ ನಾಲೇಜ್ ಸಿಟಿ ಉದ್ಘಾಟನಾ ಸಮಿತಿಯ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್ ಸಖಾಫಿ, ಕೋ ಆರ್ಡಿನೇಟರ್ ಮರ್ಝೂಖ್ ಸ‌ಅದಿ ಅಲ್ ಕಾಮಿಲ್ ಸಂದೇಶ ಭಾಷಣ  ಮಾಡುವರು.
ಸದರಿ ಸಮಾವೇಶದಲ್ಲಿ ದಕ್ಷಿಣ ಕನ್ನಡ ವೆಸ್ಟ್, ದ.ಕ.ಈಸ್ಟ್, ಉಡುಪಿ,ಹಾಗೂ ಕಾರವಾರ ಜಿಲ್ಲೆಗಳ ಜಂಇಯ್ಯತುಲ್ ಉಲಮಾ, ಮುಸ್ಲಿಂ ಜಮಾಅತ್, ಎಸ್.ವೈ. ಎಸ್. ಎಸ್ಸೆಸ್ಸೆಫ್, ಜಂಇಯ್ಯತುಲ್ ಮುಅಲ್ಲಿಮೀನ್, ಸುನ್ನೀ ಮ್ಯಾನೆಜ್‌ಮೆಂಟ್‌ ಅಸೋಸಿಯೇಷನ್, ಸಂಘಟನೆಗಳ ಜಿಲ್ಲಾ ನಾಯಕರು ಮತ್ತು ಕೆಳಘಟಕಗಳ ಪ್ರತಿನಿಧಿಗಳು ಹಾಗೂ ಕರ್ನಾಟಕ ಕಲ್ಚರಲ್ ಫೌಂಡೇಶನ್‌ನ ಊರಿನಲ್ಲಿರುವ ಕಾರ್ಯಕರ್ತರು ಆಗಮಿಸಿ ಸಮಾವೇಶ ಯಶಸ್ವಿಗೊಳಿಸಬೇಕಾಗಿ ಸಂಘಟನಾ ಸಮಿತಿಯ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಹಾಗೂ ಪ್ರಧಾನ ಅಬ್ದುಲ್ ಎಂ.ಪಿ‌.ಎಂ.ಅಶ್‌ರಫ್ ಸ‌ಅದಿ ಮಲ್ಲೂರು, ಕೋಶಾಧಿಕಾರಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Previous Post Next Post